March 19, 2026

ವಾಷಿಂಗ್ ಮಿಷಿನ್‌ ಕಂಪನಿ ಹೆಸರಲ್ಲಿ ಗ್ರಾಹಕರಿಗೆ ವಂಚನೆ: ಮೂವರ ಬಂಧನ

0
image_editor_output_image-1115769434-1733808031676.jpg

ಚಿಕ್ಕಬಳ್ಳಾಪುರ: ವಾಷಿಂಗ್ ಮಿಷಿನ್‌ ಕಂಪನಿ ಹೆಸರಲ್ಲಿ ಗ್ರಾಹಕರಿಗೆ ಉಚಿತ ಸೇವೆ ನೀಡುವ ನೆಪದಲ್ಲಿ ವಂಚನೆ ಎಸಗುತ್ತಿದ್ದ ಮೂವರು ಆರೋಪಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಚಿಕ್ಕಬಳ್ಳಾಪುರ ನಗರದಲ್ಲಿ ನಡೆದಿದೆ.

ವಿವೇಕಾನಂದ ಎಂಟರ್‌ಪ್ರೆಸಸ್ ಮಾಲೀಕ ಚರಣ್ ಐಎಫ್‌ಬಿ ವಾಷಿಂಗ್ ಮಿಷನ್ ಅಧಿಕೃತ ಸೇವಾದಾರರಾಗಿ ನಗರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಐಎಫ್‌ಬಿ ವಾಷಿಂಗ್ ಮಿಷನ್ ಕೊಳ್ಳುವ ಯಾವುದೇ ಗ್ರಾಹಕರಿಗೆ ಇವರು ಉಚಿತವಾಗಿ ಮನೆಗೆ ಹೋಗಿ ಸೇವೆಕೊಡುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಇವರಂತೆ ಕಂಪನಿಯ ಹೆಸರು ಹೇಳಿಕೊಂಡು ಗ್ರಾಹಕರ ಮನೆಗೆ ಹೋಗುತ್ತಿದ್ದ ಮಂಡ್ಯ ಶ್ರೀರಂಗಪಟ್ಟಣ ತುರುವೇಕೆರೆ ಮೂಲದ ಅರ್ಜುನ್, ದರ್ಶನ್, ಮಂಜುನಾಥ್ ಎಂಬ ಖದೀಮರು ನಾವೇ ಐಎಫ್‌ಬಿ ಕಂಪನಿ ಸೇವಾದಾರರು ಎಂದು ಗ್ರಾಹಕರ ಮನೆಗೆ ತರಳಿ ಯಂತ್ರದಲ್ಲಿರುವ ಅಸಲಿ ಯಂತ್ರಗಳನ್ನು ಕಳಸಿಕೊಂಡು ನಕಲಿ ಮತ್ತು ಕಳಪೆ ವಸ್ತುಗಳನ್ನು ಅದಕ್ಕೆ ಹಾಕಿ ಸಾವಿರಾರು ರೂಪಾಯಿ ಸೇವಾಶುಲ್ಕವಾಗಿ ಪಡೆದು ವಂಚನೆ ಮಾಡುತ್ತಿದ್ದರು ಎನ್ನಲಾಗಿದೆ.

Leave a Reply

Your email address will not be published. Required fields are marked *

error: Content is protected !!