September 21, 2026

ತಂದೆ ಬೈಕ್ ಕೊಡಿಸಲಿಲ್ಲ ಎಂದು ಮನನೊಂದು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಪುತ್ರ

0
image_editor_output_image-1512648512-1733556095624.jpg

ದಾವಣಗೆರೆ: ಅಪ್ಪ ಬೈಕ್ ಕೊಡಿಸಲಿಲ್ಲ ಎಂದು ಮಗ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ನ್ಯಾಮತಿ ಪಟ್ಟಣದಲ್ಲಿ ನಡೆದಿದೆ.

ಆತ್ಮಹತ್ಯೆಗೆ ಶರಣಾದ ಯುವಕನನ್ನು ವಿಕಾಸ್.ಆರ್ (20) ಎಂದು ಗುರುತಿಸಲಾಗಿದೆ. ಯುವಕ ಹಲವು ದಿನಗಳಿಂದ ಬೈಕ್ ಕೊಡಿಸುವಂತೆ ತನ್ನ ತಂದೆಯ ಬಳಿ ಕೇಳಿದ್ದ. ಹಣದ ಅಡಚಣೆಯಿಂದ ಪೋಷಕರಿಗೆ ಬೈಕ್ ಕೊಡಿಸಲು ಆಗಿರಲಿಲ್ಲ.

 

ಇದೇ ವಿಚಾರಕ್ಕೆ ಯುವಕ ಮಾನಸಿಕವಾಗಿ ಕುಗ್ಗಿ ತಂದೆ ಮೇಲೆ ಕೋಪ ಮಾಡಿಕೊಳ್ಳುತ್ತಿದ್ದ. ಮನೆಯವರ ಜೊತೆ ಮಾತನಾಡುವುದು ಮತ್ತು ಸರಿಯಾಗಿ ಊಟ ಮಾಡುವುದನ್ನು ಸಹ ಬಿಟ್ಟಿದ್ದ. ಮನೆ ತೊರೆದು ಒಂದು ವಾರದಿಂದ ಕುಂಕುವ ಗ್ರಾಮದ ಸಂಬಂಧಿಕರ ಮನೆಯಲಿದ್ದ. ಅಲ್ಲೇ ಆತ ವಿಷ ಸೇವಿಸಿದ್ದಾನೆ.

Leave a Reply

Your email address will not be published. Required fields are marked *

You may have missed

error: Content is protected !!