March 20, 2026

ಮಂಗಳೂರು: ಪ್ಲಿಪ್‌ಕಾರ್ಟ್‌ ಖಾತೆ ಹ್ಯಾಕ್‌ ಮಾಡಿ ವಂಚನೆ: ಸೈಬರ್‌ ವಂಚಕನ ಬಂಧನ

0
image_editor_output_image2077535199-1733551080283.jpg

ಮಂಗಳೂರು: ವ್ಯಕ್ತಿಯೋರ್ವರಿಗೆ ಎಪಿಕೆ ಫೈಲ್‌ ಕಳುಹಿಸಿ ಅವರ ಪ್ಲಿಪ್‌ಕಾರ್ಟ್‌ ಖಾತೆ ಹ್ಯಾಕ್‌ ಮಾಡಿ ವಂಚಿಸಿದ ಸೈಬರ್‌ ವಂಚಕನೋರ್ವನನ್ನು ಮಂಗಳೂರಿನ ಸೆನ್‌ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹೊಸದಿಲ್ಲಿ ನಿವಾಸಿ ಗೌರವ್‌ ಮಕ್ವಾನ್‌ (25) ಬಂಧಿತ ಆರೋಪಿ. ಈತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

4 ಲ.ರೂ. ಮೌಲ್ಯದ ಸೊತ್ತುಗಳ ವಶ
ಬಂಧಿತ ಆರೋಪಿಯಿಂದ 2 ಆಂಡ್ರಾಯ್ಡ ಫೋನ್‌, 5 ಐಫೋನ್‌-15, 2 ಇಯರ್‌ಪಾಡ್‌ ಹಾಗೂ ಕೃತ್ಯಕ್ಕೆ ಬಳಸಿದ್ದ ಮೊಬೈಲ್‌ ಫೋನ್‌ ಸೇರಿದಂತೆ 4 ಲ.ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತ ಆರೋಪಿ ಇತರ ಆರೋಪಿಗಳ ಜತೆ ಸೇರಿ ಹಲವಾರು ಮಂದಿಗೆ ವಂಚಿಸಿರುವುದು ಬೆಳಕಿಗೆ ಬಂದಿದೆ.

Leave a Reply

Your email address will not be published. Required fields are marked *

error: Content is protected !!