ಪುತ್ತೂರು: ಖ್ಯಾತ ನಿರೂಪಕ, ಪ್ರಭಾರ ಮುಖ್ಯ ಶಿಕ್ಷಕ ಪ್ರದೀಪ್ ಬಾಕಿಲ ಹೃದಯಾಘಾತದಿಂದ ನಿಧನ

ಪುತ್ತೂರು: ಅಲಂಕಾರು ಬಾಕಿಲ ನಿವಾಸಿ ಜೆಸಿಐ ನ ತರಬೇತುದಾರ ಶಾಂತಿನಗರ ಶಾಲಾ ಪ್ರಭಾರ ಮುಖ್ಯ ಗುರು ಪ್ರದೀಪ್ ಬಾಕಿಲ(42) ನಿಧನರಾದ ಘಟನೆ ನಡೆದಿದೆ.
ಪ್ರದೀಪ್ ರವರ ಮೃತದೇಹ ಮನೆಯಂಗಳದ ಶೆಡ್ ನಲ್ಲಿ ಪತ್ತೆಯಾಗಿದೆ. ಮೇಲ್ನೋಟಕ್ಕೆ ಹೃದಯಾಘಾತ ಸಂಭವಿಸಿರಬಹುದು ಎಂದು ಹೇಳಲಾಗಿತ್ತಿದ್ದು ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.
ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.