ವಿಟ್ಲ: ವಿಠಲ ಪದವಿ ಪೂರ್ವ ಕಾಲೇಜ್ ನಲ್ಲಿ ವಾರ್ಷಿಕೋತ್ಸವ

ವಿಟ್ಲ: ವಿಟ್ಠಲ ಎಜುಕೇಶನ್ ಸೊಸೈಟಿ ಯ ಪದವಿ ಪೂರ್ವ ಕಾಲೇಜು ಮತ್ತು ವಿಟ್ಠಲ ಸುಪ್ರಜಿತ್ ಐಟಿಐ ವಿಭಾಗದ ವಾರ್ಷಿಕೋತ್ಸವ ಸುವರ್ಣ ರಂಗ ಮಂದಿರದಲ್ಲಿ ನಡೆಯಿತು.
ಈ ಕಾರ್ಯಕ್ರಮವನ್ನು ಸಭಾಧ್ಯಕ್ಷತೆ ವಹಿಸಿದ್ದ ಮುಗುಳಿ ತಿರುಮಲೇಶ್ವರ ಭಟ್ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೆ ಎಂ ಕೃಷ್ಣ ಭಟ್ ಮತ್ತು ಬೆಂಗಳೂರು ಟ್ರಾನ್ಸೆಂಡ್ ಕಾಲೇಜಿನ ಉಪನ್ಯಾಸಕಿ ಅಪರ್ಣಾ ಬರೆಂಗಾಯಿ ಇವರು ಭಾಗವಹಿಸಿದ್ದರು.
ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ಪ್ರೀತೇಶ್, ಲವಿಶ್ ಶೆಟ್ಟಿ, ತಸ್ಲಿಯಾ ಮತ್ತು ಪಲ್ಲವಿ ಪಾದೆಕಲ್ಲು, ಆಡಳಿತ ಮಂಡಳಿ ಕೋಶಾಧಿಕಾರಿ ಬಾಬು ಕೊಪ್ಪಳ, ಸದಸ್ಯ ನಿತ್ಯಾನಂದ ನಾಯಕ್, ಉಪ ಪ್ರಿನ್ಸಿಪಾಲ್ ಕಿರಣ್ ಕುಮಾರ್ ಬ್ರಹ್ಮಾವರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯದರ್ಶಿ ರಾಧಾಕೃಷ್ಣ ನಾಯಕ್ ಸ್ವಾಗತಿಸಿದರು. ಪ್ರಿನ್ಸಿಪಾಲ್ ಆದರ್ಶ ಚೊಕ್ಕಾಡಿ ಮತ್ತು ಐಟಿಐ ಪ್ರಿನ್ಸಿಪಾಲ್ ರಮೇಶ್ ರೈ ವರದಿ ವಾಚಿಸಿದರು. ರೂಪಶ್ರೀ ವಂದಿಸಿದರು. ಜಲಜಾಕ್ಷಿ ನಿರೂಪಿಸಿದರು. ಮುಕ್ತಾಶ್ರೀ, ಪ್ರಮೀಳಾ, ಪ್ರಕಾಶ್ ನಾಯಕ್, ಸವಿತಾ, ಸಂಪಾವತಿ, ಚಂದ್ರಕಲಾ, ಚಂದ್ರಕಾಂತ್, ಹಿತಾ ಮತ್ತು ನಳಿನಿ ಸಹಕರಿಸಿದರು.