March 16, 2025

ಮಂಗಳೂರು: ನಿಡ್ಡೋಡಿಯ ಅಕ್ರಮ ಕಲ್ಲುಕೋರೆಗಳಿಗೆ ಲೋಕಾಯುಕ್ತ ಅಧಿಕಾರಿಗಳ ದಾಳಿ

0

ಮಂಗಳೂರು: ಪರವಾನಗಿ ಇಲ್ಲದೆ ಕಾರ್ಯಾಚರಣೆ ನಡೆಸುತ್ತಿದ್ದ ನಿಡ್ಡೋಡಿಯ ಕಲ್ಲುಕೋರೆಗಳಿಗೆ ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ (ಡಿ.03) ಬೆಳಗ್ಗೆ ದಾಳಿ ನಡೆಸಿದ್ದಾರೆ.

ನಿಡ್ಡೋಡಿಯ ಕಲ್ಲುಕೋರೆಗಳಿಗೆ ಉಪಲೋಕಾಯುಕ್ತ ಜ.ವೀರಪ್ಪ ದಾಳಿ ನಡೆಸಿದ್ದಾರೆ. ಕಲ್ಲು ಕೋರೆಗಳನ್ನು ಲೈಸೆನ್ಸ್ ಇಲ್ಲದೆ ಕಾರ್ಯಾಚರಣೆ ನಡೆಸಲಾಗುತ್ತಿತ್ತು. ಪಟ್ಟಾ‌ ಜಮೀನಿನಲ್ಲಿ ಅವಧಿ ಮುಗಿದರೂ ಕಾರ್ಯಾಚರಣೆ ಮಾಡುತ್ತಿದ್ದರು.

ಅಧಿಕಾರಿಗಳು ದಾಳಿ ನಡೆಸುತ್ತಿದ್ದಂತೆ ಜೆಸಿಬಿ ಜೊತೆ ಕಾರ್ಮಿಕರು ಓಡಿ ಹೋಗಿದ್ದಾರೆ. ಪ್ರಕರಣ ದಾಖಲಿಸಿ ಯಂತ್ರೋಪಕರಣಗಳ ವಶ ಪಡೆಯಲು ಮೂಡುಬಿದಿರೆ ಪೊಲೀಸರಿಗೆ ನಿರ್ದೇಶನ ನೀಡಲಾಗಿದೆ.

 

 

Leave a Reply

Your email address will not be published. Required fields are marked *

error: Content is protected !!