March 16, 2025

ದುಲ್ ಫುಖಾರ್ ಚೆಡವು ಕನ್ಯಾನ: ಬೆಳ್ಳಿ ಹಬ್ಬದ ಪ್ರಯುಕ್ತ ರಕ್ತದಾನ ಶಿಬಿರ ಹಾಗೂ ಸಾಧಕರಿಗೆ ಸನ್ಮಾನ

0

ಬಂಟ್ವಾಳ: 2024-25 ನೇ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ದುಲ್ ಫುಖಾರ್ ಸೇವಾ ಟ್ರಸ್ಟ್ ಚೆಡವು ಕನ್ಯಾನ ಇದರ ಬೆಳ್ಳಿ ಹಬ್ಬದ ಪ್ರಯುಕ್ತ ರಕ್ತದಾನ ಶಿಬಿರ ಹಾಗೂ ಸಾಧಕರಿಗೆ ಸನ್ಮಾನ ಮತ್ತು ಬೆಳ್ಳಿ ಹಬ್ಬದ ಲೋಗೋ ಬಿಡುಗಡೆ ಕನ್ಯಾನ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಡಿಸೆಂಬರ್ 1 ಆದಿತ್ಯವಾರ ಯಶಸ್ವಿಯಾಗಿ ನಡೆಯಿತು.

ಬಡ ಮತ್ತು ಅನಾಥರ ಸೇವೆಯಲ್ಲಿ 25 ವರ್ಷಗಳನ್ನು ಪೂರ್ತಿಗೊಳಿಸಿದ ದುಲ್ ಫುಖಾರ್ ಸಂಘಟನೆ ಶೈಕ್ಷಣಿಕ ಮತ್ತು ಆರೋಗ್ಯ ರಂಗದಲ್ಲಿ ಹಲವಾರು ಜೀವ ಕಾರ್ಯ ಯೋಜನೆಗಳನ್ನು ನಡೆಸುತ್ತಾ ಸಮಾಜಕ್ಕೆ ಮಾದರಿಯಾಗಿ ಮುನ್ನಡೆಯುತ್ತಿದೆ.

ದುಲ್ ಫುಖಾರ್ ಸೇವಾ ಸಂಘಟನೆಯ ಬೆಳ್ಳಿ ಹಬ್ಬದ ಲೋಗೋವನ್ನು ವೇದಿಕೆಯಲ್ಲಿದ್ದ ಗಣ್ಯಾತಿ ಗಣ್ಯರು  ಬಿಡುಗಡೆಗೊಳಿಸಿದರು. ದುಲ್ ಫುಖಾರ್ ಸೇವಾ ಟ್ರಸ್ಟ್, ದುಲ್ ಫುಖಾರ್ ಗಲ್ಫ್ ಕಮಿಟಿ, ರೆಡ್ ಕ್ರಾಸ್ ಸೊಸೈಟಿ ಬ್ಲಡ್ ಬ್ಯಾಂಕ್ ಮತ್ತು ಲೇಡಿ ಗೋಶನ್ ಆಸ್ಪತ್ರೆ ಮಂಗಳೂರು ಸಹಯೋಗದಲ್ಲಿ ನಡೆದಂತಹ ರಕ್ತದಾನ ಶಿಬಿರದಲ್ಲಿ ಮಹಿಳೆಯರು ಮತ್ತು ಹಿಂದೂ ಸಹೋದರರು ಸೇರಿ ಸುಮಾರು 70 ಜನರು ಭಾಗವಹಿಸಿ ರಕ್ತದಾನ ಮಾಡಿದರು

 

 

ವಿಭಿನ್ನ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಲಾಯಿತು. ಸೇವಾ ರಂಗದಲ್ಲಿ ಸತತ 28 ಸಲ ರಕ್ತದಾನ ಮಾಡಿ ಸಮಾಜಕ್ಕೆ ಮಾದರಿಯಾದ ಅಬ್ದುಲ್ ಖಾದರ್ ಸಅದಿ ರವರನ್ನು ಗೌರವಿಸಿ ಸನ್ಮಾನಿಸಲಾಯಿತು. ಆರೋಗ್ಯ ಕ್ಷೇತ್ರದಲ್ಲಿ ಸತತ 58 ವರ್ಷಗಳಿಂದ ವೈದ್ಯರಾಗಿ ಸೇವೆ ಸಲ್ಲಿಸಿದ ಡಾ|ವೆಂಕಟರಮಣ ಭಟ್ ಕೋಡ್ಲ ಅವರನ್ನು ಸನ್ಮಾನಿಸಲಾಯಿತು.

ಶೈಕ್ಷಣಿಕ ರಂಗದಲ್ಲಿ 36 ವರ್ಷಗಳಿಂದ ವಿಧ್ಯೆ ನೀಡಿ ಸಾವಿರಾರು ಮಕ್ಕಳ ಬಾಳಿಗೆ ಬೆಳಕಾದ ಅಬೂಬಕರ್ ಮಾಸ್ಟರ್ ಕರೋಪಾಡಿ ರವರನ್ನು ಗೌರವಿಸಲಾಯಿತು. ಕ್ರೀಡಾ ಕ್ಷೇತ್ರದಲ್ಲಿ ಮಣಿಪುರದ ಇಂಪಾಲ್ ನಲ್ಲಿ ನಡೆಯುವ ರಾಷ್ಟ್ರ ಮಟ್ಟದ 69 ಕೆಜಿ ವಿಭಾಗದ  ವೈಟ್ ಲಿಫ್ಟಿಂಗ್‌ ಗೆ ಆಯ್ಕೆಗೊಂಡ ಶಮೀದ್ ಅಬ್ದುಲ್ ರವರನ್ನುಸನ್ಮಾನಿಸಿ ಗೌರವಿಸಲಾಯಿತು. ವಿಜಯಡ್ಕ ಚರ್ಚ್ ನಲ್ಲಿ ಹಲವಾರು ವರ್ಷ ಸೇವೆ ಸಲ್ಲಿಸಿ ನಿವೃತರಾದ ಹಿರಿಯ ಧರ್ಮಗುರು ಫಾದರ್ ಪೀಟರ್ ಸೆರಾವೊ ರವರನ್ನೂ ಗೌರವಿಸಿ ಸನ್ಮಾಸಲಾಯಿತು.

ಸಭಾ ಕಾರ್ಯಕ್ರಮದಲ್ಲಿ ಕನ್ಯಾನ ಕೇಂದ್ರ ಮಸೀದಿಯ ಧರ್ಮಗುರು ಕೆ.ಎಂ ಇಬ್ರಾಹಿಂ ಪೈಝಿ, ನಿಯಾಝ್ ಕಾಮಿಲ್ ಸಖಾಫಿ ಕುಕ್ಕಾಜೆ, KPCC ಕಾರ್ಯದರ್ಶಿ ಎಂ.ಎಸ್ ಮಹಮ್ಮದ್, ಕನ್ಯಾನ ಗ್ರಾಂ.ಪಂ ಉಪಾಧ್ಯಕ್ಷ ಕೆ.ಪಿ ಅಬ್ದುಲ್ ರಹಿಮಾನ್, ಕರೋಪಾಡಿ ಗ್ರಾಂ.ಪಂ ಉಪಾಧ್ಯಕ್ಷ ಅನ್ವರ್ ಕರೋಪಾಡಿ, CRP ಕನ್ಯಾನ ಕ್ಲಸ್ಟರ್ ಚಂದ್ರ ಶೇಖರ್, SMA ಕನ್ಯಾನ ರೀಜನಲ್ ಅಧ್ಯಕ್ಷರಾದ ಇಸ್ಮಾಯಿಲ್ ಹಾಜಿ ಪರಿಂಕಿಲ್, ಸಾಮಾಜಿಕ ಕಾರ್ಯಕರ್ತರಾದ ಶಾಕಿರ್ ಅಳಕೆ ಮಜಲು, ಎಂ.ಕೆ ಕುಂಞ ಹಾಜಿ, ಮುಹಮ್ಮದ್ ಹಾಜಿ ಬಂಡಿತ್ತಡ್ಕ, ಅಶ್ರಫ್ ಮದನಿ ಚೆಂಬರ್ಪು ಸಹಿತ ಅನೇಕರು ಭಾಗವಹಿಸಿ ಸಂದರ್ಭನುಸಾರ ಮಾತನಾಡಿ ಶುಭ ಹಾರೈಸಿದರು.

Leave a Reply

Your email address will not be published. Required fields are marked *

error: Content is protected !!