ಮಂಗಳೂರು: ಗ್ರಾ.ಪಂಚಾಯತ್ ಉಪಚುನಾವಣೆಯಲ್ಲಿ ಅಭೂತಪೂರ್ವ ಗೆಲವು: ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ವತಿಯಿಂದ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಅಭಿನಂದನಾ ಸಭೆ

ಮಂಗಳೂರು: ಇತ್ತೀಚೆಗೆ ದ.ಕನ್ನಡ ಜಿಲ್ಲೆಯಾದ್ಯಂತ ನಡೆದ ಉಪಚುನಾವಣೆಯಲ್ಲಿ ಗೆಲವು ಸಾಧಿಸಿದ 23 ಅಭ್ಯರ್ಥಿಗಳಿಗೆ ಸ್ಪೂರ್ತಿ ಹಾಗೂ ನೈತಿಕ ಬೆಂಬಲ ನೀಡುವ ಉದ್ದೇಶದಿಂದ ಇಂದು ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಜಿಲ್ಲಾ ಕಾಂಗ್ರೆಸ್ ಮುಖಂಡರ ಸಮ್ಮುಖದಲ್ಲಿ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ವಿಧಾನ ಪರಿಷತ್ ಮಾಜಿ ಶಾಸಕರೂ, ಜಿಲ್ಲಾ ಕಾಂಗ್ರೆಸ್ ಅದ್ಯಕ್ಷರಾದ ಶ್ರೀ ಹರೀಶ್ ಕುಮಾರ್ ವಹಿಸಿದ್ದರು. ಗೆಲುವಿನ ಹಿಂದಿನ ಶಕ್ತಿಯಾಗಿ ಕೆಲಸಮಾಡಿ ಪ್ರೋತ್ಸಾಹ ನೀಡಿ ಸಹಕಾರ ನೀಡಿದ ಕೆ.ಪಿ.ಸಿ.ಸಿ.ಕಾರ್ಯದ್ಯಕ್ಷರೂ, ವಿಧಾನ ಪರಿಷತ್ ಶಾಸಕರಾದ ಮಂಜುನಾಥ ಭಂಡಾರಿ, ಮಾಜಿ ಸಚಿವರಾದ ಶ್ರೀ. ಬಿ.ರಮನಾಥ ರೈ, ವಿಧಾನ ಪರಿಷತ್ ಶಾಸಕರಾದ ಐವನ್ ಡಿ.ಸೋಝಾ, ಕಳೆದ ಲೋಕಸಬಾ ಅಭ್ಯರ್ಥಿ ಪದ್ಮರಾಜ್, ಕೆ.ಪಿ.ಸಿ.ಸಿ.ಪ್ರದಾನ ಕಾರ್ಯದರ್ಶಿ ಮಿಥುನ್ ರೈ, ಬೆಳ್ತಂಗಡಿ ವಿಧಾನಸಭಾ ಕಾಂಗ್ರೆಸ್ ಮುಖಂಡ ರಕ್ಷಿತ್ ಶಿವರಾಂ, ಮಂಗಳೂರು ಉತ್ತರದ ಇನಾಯತ್ ಅಲಿ, ಕರ್ನಾಟಕ ಗೇರು ನಿಘಮದ ಅದ್ಯಕ್ಷರಾದ ಮಮತಾ ಗಟ್ಟಿ, ಮಾಜಿ ಶಾಸಕರಾದ ಜೆ.ಆರ್ ಲೋಬೋ, ದ.ಕ.ಜಿ.ಪಂಚಾಯತ್ ಮಾಜಿ ಉಪಾಧ್ಯಕ್ಷರೂ, ಕೆ.ಪಿ.ಸಿ.ಸಿ. ಐದು ಜಿಲ್ಲೆಯ ಕಾರ್ಯದ್ಯಕ್ಷರ ಉಸ್ತುವಾರಿಯಾದ ಎಂ.ಎಸ್.ಮಹಮ್ಮದ್, ಮಾಜಿ ಜಿಲ್ಲಾದ್ಯಕ್ಷರಾದ ಇಬ್ರಾಹಿಂ ಕೋಡಿಜಾಲ್ ಸೇರಿದಂತೆ ಜಿಲ್ಲಾ ಕಾಂಗ್ರೆಸ್ ವಿವಿಧ ಮುಂಚೂಣಿ ಘಟಕದ ಅದ್ಯಕ್ಷರುಗಳು, ಜಿಲ್ಲಾ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಯಶಸ್ವಿ ಸಂಘಟಕರೂ, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾದ್ಯಕ್ಷರಾದ ಶ್ರೀ ಕುಳಾಲು ಸುಭಾಶ್ಚಂದ್ರ ಶೆಟ್ಟಿ ಸ್ವಾಗತಿಸಿ, ಧನ್ಯವಾದ ತಿಳಿಸಿದರು.