50 ಸಾವಿರ ರೂ. ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ಪುರಸಭೆಯ ಮುಖ್ಯಾಧಿಕಾರಿ
ಭಟ್ಕಳ: ಇಲ್ಲಿನ ಪುರಸಭೆ ಕಚೇರಿ ಮೇಲೆ ಶುಕ್ರವಾರ ಬೆಳಿಗ್ಗೆ ದಿಢೀರ್ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ₹50 ಸಾವಿರ ಲಂಚ ಪಡೆಯುತ್ತಿದ್ದ ಮುಖ್ಯಾಧಿಕಾರಿ ನೀಲಕಂಠ ಮೇಸ್ತ ಅವರನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿದ್ದಾರೆ.
ಪಟ್ಟಣದ ಕಿದ್ವಾಯಿ ರಸ್ತೆಯಲ್ಲಿರುವ ಹೊಸ ಮನೆಯ ಒಳಚರಂಡಿ ಸಂಪರ್ಕ ಪಡೆಯುವ ಸಲುವಾಗಿ ನಿರಾಕ್ಷೇಪಣೆ ಪತ್ರಕ್ಕಾಗಿ ಮೊಹಮ್ಮದ ಇದ್ರೀಸ್ ಎನ್ನುವವರು ಅರ್ಜಿ ಸಲ್ಲಿಸಿದ್ದರು. ನಿರಾಪೇಕ್ಷಣಾ ಪತ್ರ ನೀಡಲು ಮುಖ್ಯಾಧಿಕಾರಿ ₹50 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಇದ್ರಿಸ್ ಅಧಿಕಾರಿಗೆ ನೀಡುವ ಹಣವನ್ನು ಮುಖ್ಯಾಧಿಕಾರಿ ಅವರ ವಾಹನ ಚಾಲಕ ಶಂಕರ ನಾಯ್ಕ ಎಂಬುವವರಿಗೆ ನೀಡುವ ವೇಳೆ ಅವರನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.