March 18, 2026

ಮಂಗಳೂರು: ಬೆಂಕಿಗಾಹುತಿಯಾದ ಕಾರು: ಕದ್ರಿ ಯುದ್ದ ಸ್ಮಾರಕದ ಬಳಿ ನಡೆದ ಘಟನೆ ಬೆಂಕಿಗಾಹುತಿಯಾದ ಕಾರು

0
image_editor_output_image291870472-1731676001629

ಮಂಗಳೂರು: ಮಂಗಳೂರು ನಗರದ ಕದ್ರಿ ಪೊಲೀಸ್ ಠಾಣೆ ಮುಂಭಾಗ ಯುದ್ದ ಸ್ಮಾರಕದ ಬಳಿ ನಿಲ್ಲಿಸಿದ್ದ ಕಾರೊಂದು ಬೆಂಕಿಗಾಹುತಿಯಾದ ಘಟನೆ ನಡೆದಿದೆ.

ಕಾರನ್ನು ಸ್ಮಾರಕದ ಸಮೀಪ ಪಾರ್ಕ್ ಮಾಡಲಾಗಿದ್ದು, ಇದ್ದಕ್ಕಿದ್ದ ಹಾಗೆ ಬೆಂಕಿ ಹೊತ್ತಿಕೊಂಡಿದೆ. ಈ ವೇಳೆ ಕಾರಿನಲ್ಲಿ ಯಾರೂ ಇರಲಿಲ್ಲ. ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹತ್ತಿಕೊಂಡಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. 2.40 ಲಕ್ಷ ಕೊಟ್ಟು ಇವತ್ತಷ್ಟೆ ಕಾರು ಖರೀದಿ ಮಾಡಿದ್ದರು ಎನ್ನಲಾಗಿದೆ. ಅಗ್ನಿಶಾಮಕದಳ, ಸ್ಥಳಿಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಾಗಿದೆ.

Leave a Reply

Your email address will not be published. Required fields are marked *

error: Content is protected !!