December 10, 2024

ರಾಜ್ಯ ಸರ್ಕಾರ ರಸ್ತೆಯಲ್ಲಿ ನಿಧಿ ಹುಡುಕುವ ಕೆಲಸ ಮಾಡಿದೆ: ಕಡಬದಿಂದ ಕುಕ್ಕೆ ಸುಬ್ರಹ್ಮಣ್ಯ ರಸ್ತೆಯ ದುರಾವಸ್ಥೆಯ ಬ್ಯಾನರ್ ವೈರಲ್

0

ಸುಬ್ರಹ್ಮಣ್ಯ: ಕಡಬದಿಂದ ಕುಕ್ಕೆ ಸುಬ್ರಹ್ಮಣ್ಯ ರಸ್ತೆಯ ದುರಾವಸ್ಥೆಯಿಂದ ಅಲ್ಲಿನ ಜನರು ಸಾಕಷ್ಟು ಹೈರಾಣಾಗಿ ಹೋಗಿದ್ದಾರೆ. ರಸ್ತೆಯಲ್ಲಿರುವ ಹೊಂಡಗುಂಡಿ ತಪ್ಪಿಸಿಕೊಂಡು ಸಂಚರಿಸುವುದೇ ಕಷ್ಟಕರವಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಕಾರಣಕ್ಕಾಗಿ, ಸ್ಥಳೀಯರು ಒಂದು ಬ್ಯಾನರ್ ಅಳವಡಿ ಇಲಾಖೆಗೆ ಟಾಂಗ್ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರೋ ಈ ಬ್ಯಾನರ್ ನಿಂದ ಇಲಾಖೆ ಮುಜುಗರಕ್ಕೆ ಒಳಗಾಗಿದೆ. ಯಾರೋ ಮಾಂತ್ರಿಕರು ಕೈಕಂಬದಿಂದ ಕುಕ್ಕೆ ಸುಬ್ರಹ್ಮಣ್ಯ ವರೆಗಿನ ರಸ್ತೆಯಲ್ಲಿ ನಿಧಿ ಇದೆ ಅಂತ ಹೇಳಿದ್ದು, ರಾಜ್ಯ ಸರ್ಕಾರ ಇಲ್ಲಿ ನಿಧಿ ಹುಡುಕುವ ಕೆಲಸ ಮಾಡಿದೆ.

ಈ ಕಾರಣದಿಂದ ಅಲ್ಲಲ್ಲಿ ದೊಡ್ಡ ಗುಂಡಿಗಳಿದ್ದು ಮುಚ್ಚದೆ ಹಾಗೇ ಬಿಟ್ಟಿದ್ದಾರೆ ವಾಹನ ನಿಧಾನವಾಗಿ ಚಲಾಯಿಸಿ ಎಂದು ಬರೆದಿದ್ದಾರೆ. ಮಳೆಗಾಲ ಮುಗಿದ್ರೂ ರಸ್ತೆಯ ದುರಸ್ಥಿಗೆ ಮುಂದಾಗದ ಪಿಡಬ್ಲ್ಯು ಇಲಾಖೆಗೆ ಇಂತಹ ಒಂದು ಬ್ಯಾನರ್ ಮೂಲಕ ಜನರು ಟಾಂಗ್ ಕೊಟ್ಟಿದ್ದಾರೆ.

 

 

Leave a Reply

Your email address will not be published. Required fields are marked *

error: Content is protected !!