ಕುಂಡಡ್ಕ: ಗುರುನಗರ ಬಿಲ್ಲವ ಸಂಘದ 24 ನೇ ವರ್ಷದ ವಾರ್ಷಿಕೋತ್ಸವ, ಗುರುಪೂಜೆಯ ಆಮಂತ್ರಣ ಪತ್ರಿಕೆ ಬಿಡುಗಡೆ
ಕುಂಡಡ್ಕ : ಬಿಲ್ಲವ ಸಂಘ (ರಿ ) ಗುರುನಗರ ಕುಂಡಡ್ಕ ಇಲ್ಲಿನ 24 ನೇ ವರ್ಷದ ವಾರ್ಷಿಕೋತ್ಸವ ಮತ್ತು ಗುರುಪೂಜೆಯ ಆಮಂತ್ರಣ ಪತ್ರಿಕೆಯ ಬಿಡುಗಡೆಯು ಬಿಲ್ಲವ ಸಮುದಾಯ ಭವನದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ವಿನೋದ್ ಕುಮಾರ್ ಬೋಳಿಗದ್ದೆ, ಕಾರ್ಯದರ್ಶಿ ಚೇತನ್ ಮರುವಾಳ, ಕೋಶಾಧಿಕಾರಿ ರಾಜೇಶ್ ಹೊಯ್ಗೆ, ನಿಕಟಪೂರ್ವ ಅಧ್ಯಕ್ಷರು ದೂಮಪ್ಪ ಪೂಜಾರಿ ಪೆರ್ವಾಜೆ, ಸ್ಥಾಪಕಧ್ಯಕ್ಷರು ನಾರಾಯಣ ಪೂಜಾರಿ ಯಸ್. ಕೆ ಹಾಗೂ ಸಂಘದ ಸರ್ವ ಸದಸ್ಯರು ಭಾಗವಹಿಸಿದ್ದರು.