ಮೈದಾನದಲ್ಲಿಯೇ ಕ್ಯಾಪ್ಟನ್ ಜೊತೆಗೆ ವಾಗ್ವಾದ: ಆಟ ಅರ್ಧಕ್ಕೆ ಬಿಟ್ಟು ಹೊರ ನಡೆದ ವೆಸ್ಟ್ ಇಂಡೀಸ್ ವೇಗಿ ಅಲ್ಝಾರಿ ಜೋಸೆಫ್ ಅಮಾನತು
ಬಾರ್ಬಡೋಸ್: ಬ್ರಿಡ್ಜ್ಟೌನ್’ನ ಕೆನ್ಸಿಂಗ್ಟನ್ ಓವಲ್’ನಲ್ಲಿ ಗುರುವಾರ ನಡೆದ ಇಂಗ್ಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವೇಗದ ಬೌಲರ್ ಅಲ್ಜಾರಿ ಜೋಸೆಫ್ ವಿಕೆಟ್ ಮೇಡನ್ ಓವರ್ ಎಸೆದ ನಂತರ ಕೋಪದಿಂದ ಮೈದಾನದಿಂದ ಹೊರನಡೆದ ನಡೆದಿದೆ.
ವೇಗದ ಬೌಲರ್ ಜೋರ್ಡಾನ್ ಕಾಕ್ಸ್ಗೆ ಬೌಲಿಂಗ್ ಮಾಡುತ್ತಿದ್ದಾಗ ಮೊದಲ ಇನ್ನಿಂಗ್ಸ್’ನ ನಾಲ್ಕನೇ ಓವರ್ ನಲ್ಲಿ ಈ ಘಟನೆ ನಡೆದಿದೆ. ಸಧ್ಯ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ಇಂಗ್ಲೆಂಡ್ ತಂಡದ ವಿರುದ್ಧ ನಡೆದ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯದ ವೇಳೆ ಫೀಲ್ಡಿಂಗ್ ನಿಯೋಜನೆ ವಿಚಾರದಲ್ಲಿ ತನ್ನದೇ ನಾಯಕ ಶಾಯಿ ಹೋಪ್ ರೊಂದಿಗೆ ಮೈದಾನದಲ್ಲಿ ವಾಗ್ವಾದ ನಡೆಸಿ, ತಮ್ಮ ಓವರ್ ಮುಗಿಯುತ್ತಿದ್ದಂತೆ ಮೈದಾನದಿಂದ ಹೊರನಡೆದ ವೆಸ್ಟ್ ಇಂಡೀಸ್ ವೇಗದ ಬೌಲರ್ ಅಲ್ಝರಿ ಜೋಸೆಫ್ ಅವರನ್ನು ಎರಡು ಪಂದ್ಯಗಳಿಗೆ ಅಮಾನತುಗೊಳಿಸಲಾಗಿದೆ.
ಬುಧವಾರ ನಡೆದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವು ಇಂಗ್ಲೆಂಡ್ ತಂಡದ ವಿರುದ್ಧದ ಪಂದ್ಯವನ್ನು ಜಯಿಸುವ ಮೂಲಕ ಮೂರು ಪಂದ್ಯಗಳ ಸರಣಿಯನ್ನು ಕೈವಶ ಮಾಡಿಕೊಂಡಿತು. ಇದೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವು ಬೌಲಿಂಗ್ ಮಾಡುತ್ತಿದ್ದ ವೇಳೆ, ತಮ್ಮದೊಂದು ಓವರ್ ನಲ್ಲಿ ನಾಯಕ ಶಾಯಿ ಹೋಪ್ ನಿಯೋಜಿಸಿದ ಫೀಲ್ಡಿಂಗ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅಲ್ಝರಿ ಜೋಸೆಫ್, ತಮ್ಮ ಓವರ್ ಮುಕ್ತಾಯಗೊಂಡ ನಂತರ ಮೈದಾನದಿಂದಲೇ ಹೊರ ನಡೆದರು. ಇದರಿಂದ ವೆಸ್ಟ್ ಇಂಡೀಸ್ ತಂಡ ತೀವ್ರ ಮುಜುಗರಕ್ಕೀಡಾಯಿತು.
ಜೋಸೆಫ್ ಬೌಲ್ ಮಾಡಿದ ನಾಲ್ಕನೆಯ ಓವರ್ ಗೂ ಮುನ್ನ, ನಾಯಕ ಶಾಯಿ ಹೋಪ್ ಹಾಗೂ ಅವರೊಂದಿಗೆ ಸುದೀರ್ಘ ವಾಗ್ವಾದ ನಡೆಯಿತು. ಇದರಿಂದ ಅಂಪೈರ್ ಗಳು ಆಟವನ್ನು ಮುಂದುವರಿಸುವಂತೆ ಅವರಿಗೆ ಸಲಹೆ ನೀಡಬೇಕಾದ ಸ್ಥಿತಿ ಸೃಷ್ಟಿಯಾಯಿತು. ಜೋಸೆಫ್ ಓವರ್ ನ ಒಂದು ಬಾಲ್ ಅನ್ನು ಇಂಗ್ಲೆಂಡ್ ಬ್ಯಾಟರ್ ಆಫ್ ಸೈಡ್ ಗೆ ಅಟ್ಟಿದಾಗ, ನಾಯಕ ಹೋಪ್ ವಿರುದ್ಧ ಜೋಸೆಫ್ ಆಕ್ರೋಶದ ಪ್ರತಿಕ್ರಿಯೆ ವ್ಯಕ್ತಪಡಿಸಿದರು. ತಮ್ಮ ಓವರ್ ಮುಕ್ತಾಯಗೊಂಡ ನಂತರ ಮೈದಾನವನ್ನು ತೊರೆದ ಅವರು, ಸ್ವಲ್ಪ ಕಾಲದ ನಂತರ ಮತ್ತೆ ಮೈದಾನಕ್ಕೆ ಮರಳಿದರು.
ಈ ಸಂಬಂಧ ಗುರುವಾರ ಹೇಳಿಕೆ ಬಿಡುಗಡೆ ಮಾಡಿರುವ ಕ್ರಿಕೆಟ್ ವೆಸ್ಟ್ ಇಂಡೀಸ್, ಅಲ್ಝರಿ ಜೋಸೆಫ್ ವರ್ತನೆಯು ಕ್ರಿಕೆಟ್ ವೆಸ್ಟ್ ಇಂಡೀಸ್ ನ ಪ್ರಮಾಣೀಕೃತ ವೃತ್ತಿಪರತೆಯನ್ನು ಉಲ್ಲಂಘಿಸಿದೆ ಎಂದು ಹೇಳಿದೆ.
“ಅಲ್ಝರಿಯ ವರ್ತನೆಯು ಕ್ರಿಕೆಟ್ ವೆಸ್ಟ್ ಇಂಡೀಸ್ ನ ಪ್ರಧಾನ ಮೌಲ್ಯಗಳಿಗೆ ತಕ್ಕುದಾಗಿರಲಿಲ್ಲ. ಇಂತಹ ವರ್ತನೆಯನ್ನು ಉಪೇಕ್ಷಿಸಲು ಸಾಧ್ಯವಿಲ್ಲ. ಪರಿಸ್ಥಿತಿಯ ತೀವ್ರತೆಯನ್ನು ಸಂಪೂರ್ಣವಾಗಿ ಅನುಮೋದಿಸಲು ನಾವು ನಿರ್ಣಾಯಕ ಕ್ರಮ ಕೈಗೊಂಡಿದ್ದೇವೆ” ಎಂದೂ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ತಮ್ಮ ವರ್ತನೆಯ ಕುರಿತು ಅಲ್ಝರಿ ಜೋಸೆಫ್ ಕೂಡಾ ಕ್ಷಮೆಯಾಚಿಸಿದ್ದಾರೆ.