ಕಾರ್ಕಳ: ನೇಣುಬಿಗಿದು ಶಿಕ್ಷಕಿ ಆತ್ಮಹತ್ಯೆ
ಕಾರ್ಕಳ: ಕಷ್ಟಪಟ್ಟು ಓದಿ ಮದುವೆಯಾಗಿ, ಮಗುವಾದ ಬಳಿಕ ಕೆಲಸಕ್ಕೆ ಹೋಗಲು ಆಗುತ್ತಿಲ್ಲ ಎಂದು ಖಿನ್ನತೆಗೊಳಗಾಗಿ ಅತಿಥಿ ಶಿಕ್ಷಕಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಈದು ಗ್ರಾಮದಲ್ಲಿ ನಡೆದಿದೆ. ಪ್ರಸನ್ನಾ (29) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.
ಮೂಡುಬಿದಿರೆಯ ನಿವಾಸಿ ಪ್ರಸನ್ನಾ ಕಾರ್ಕಳ ತಾಲೂಕು ಈದು ಗ್ರಾಮದ ರಾಜೇಶ್ ಎಂಬವರೊಂದಿಗೆ 2022ರಲ್ಲಿ ಮದುವೆಯಾಗಿತ್ತು. ರಾಜೇಶ್ ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ಪ್ರಸನ್ನಾ ಹೊಸ್ಮಾರ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅತಿಥಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.





