December 15, 2025

ಸಗಟು ಮಳಿಗೆ ವ್ಯವಸ್ಥಾಪಕ ನೇಣುಬಿಗಿದು ಆತ್ಮಹತ್ಯೆ

0
image_editor_output_image1445187845-1730872017330.jpg

ತುರುವೇಕೆರೆ: ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ (ಕೆಎಫ್‌ಸಿಎಸ್‌ಸಿ) ಸಗಟು ಮಳಿಗೆ ವ್ಯವಸ್ಥಾಪಕ ಆರ್.ರವಿಕುಮಾರ್ (59) ಮಂಗಳವಾರ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ತಾಲ್ಲೂಕಿನ ಎಲ್ಲ ಸೊಸೈಟಿ, ವಿವಿಧ ಹಾಸ್ಟೆಲ್, ಶಾಲೆಗಳಿಗೆ ಅಕ್ಕಿ ಸೇರಿದಂತೆ ಇನ್ನಿತರ ಆಹಾರ ಪದಾರ್ಥ ಸರಬರಾಜು ಮಾಡುವ ಸಗಟು ನಿರ್ವಾಹಕ ಅಧಿಕಾರಿಯಾಗಿ ಅವರು ಕೆಲಸ ಮಾಡುತ್ತಿದ್ದರು.

ಶಿರಾ ತಾಲ್ಲೂಕಿನ ದೇವನಹಳ್ಳಿ ರವಿಕುಮಾರ್, ಪಟ್ಟಣದ ಮಾಯಸಂದ್ರ ರಸ್ತೆ ಓಂಕಾರ್ ಆಸ್ಪತ್ರೆ ಹಿಂಭಾಗದ ಕಟ್ಟಡದ ಬಾಡಿಗೆ ಮನೆಯೊಂದರಲ್ಲಿ ಹಲವು ದಿನಗಳಿಂದ ವಾಸವಾಗಿದ್ದರು. ಅವರ ಕುಟುಂಬ ತುಮಕೂರಿನಲ್ಲಿ ನೆಲಸಿದೆ. ಪಟ್ಟಣದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!