ಮಂಗಳೂರು: ನಗರದ ಹಲವೆಡೆ ಹೆಲ್ಮೆಟ್ ಕಳವು
ಮಂಗಳೂರು: ನಗರದ ಹಲವೆಡೆ ಹೆಲ್ಮೆಟ್ ಕಳವು ಮಾಡಲಾಗುತ್ತಿದ್ದು, ಇದೀಗ ಓರ್ವ ಹೆಲ್ಮೆಟ್ ಕಳ್ಳನ ಕೈ ಚಳಕದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ನಗರದ ವಾಣಿಜ್ಯ ಕಟ್ಟಡವೊಂದರ ಸಮೀಪ ನಿಲ್ಲಿಸಿದ್ದ ಬೈಕ್‌ನಲ್ಲಿದ್ದ ಹೊಸ ಹೆಲ್ಮೆಟನ್ನು ಕಳ್ಳ ಕಳವು ಮಾಡಿದ್ದು, ಆತನ ಬಳಿ ಇದ್ದ ಹಳೆಯ ಹೆಲ್ಮೆಟನ್ನು ಬೈಕ್‌ನ ಮೇಲಿಟ್ಟು ಹೋಗಿದ್ದಾನೆ. ಬಳಿಕ ತಾನು ಬಂದಿದ್ದ ಸ್ಕೂಟರ್‌ನಲ್ಲಿ ಮರಳಿದ್ದಾನೆ. ಇನ್ನು ಈತ ಇದೇ ರೀತಿ ಹಲವೆಡೆ ಹೆಲ್ಮೆಟ್ ಕದ್ದಿರುವ ಶಂಕೆ ವ್ಯಕ್ತವಾಗಿದೆ.