January 29, 2025

ಸುರತ್ಕಲ್: ಯುವತಿಗೆ 24 ತುಂಡು ಮಾಡುವೆ ಎಂದು ಬೆದರಿಕೆ ಹಾಕಿದ್ದ ಆರೋಪಿಗೆ ಜಾಮೀನು

0

ಸುರತ್ಕಲ್ :‌ ಸಹಕರಿಸದಿದ್ದರೆ 24 ತುಂಡುಗಳನ್ನಾಗಿ ಮಾಡುವೆ ಎಂದು ಯುವತಿಯೊಬ್ಬಳಿಗೆ ಬೆದರಿಕೆಯೊಡ್ಡಿದ್ದ ಪ್ರಕರಣ ಸಂಬಂಧಿಸಿ ನ್ಯಾಯಾಂಗ ಬಂಧನದಲ್ಲಿದ್ದ ಯುವಕ ಶಾರಿಕ್‌ ಗೆ ಜಾಮೀನು ಮಂಜೂರಾಗಿದೆ.

ಶಾರಿಕ್‌ ತನ್ನ ಮನೆಯ ಸಮೀಪದಲ್ಲಿ ಅಂಗಡಿ ಹೊಂದಿದ್ದ ಯುವತಿಯ ಫೇಸ್ ಬುಕ್ ಹ್ಯಾಕ್ ಮಾಡಿ ಆಕೆಯ ಸಹೋದರನಿಗೆ ಅಶ್ಲೀಲ ಮತ್ತು ಬೆದರಿಕೆ ಸಂದೇಶವನ್ನು ರವಾನಿಸಿದ್ದ ಎಂಬ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ಯುವತಿ ಅ.22 ರಂದು ಸುರತ್ಕಲ್ ಪೊಲೀಸರಿಗೆ ದೂರು ನೀಡಿದ್ದಳು. ದೂರು ಆಧರಿಸಿ ಯುವಕನನ್ನು ಠಾಣೆಗೆ ಕರೆಸಿದ್ದ ಪೊಲೀಸರು ವಿಚಾರಣೆ ನಡೆಸಿ ಅ.23ರಂದು ಹಿಂದೆ ಕಳುಹಿಸಿದ್ದರು.

ಆ ಬಳಿಕ ಮತ್ತೆ ಅದೇ ರೀತಿಯ ಸಂದೇಶಗಳು ಬರಲಾರಂಭಿಸಿದವು ಎನ್ನಲಾಗಿದ್ದು, ಇದರಿಂದ ಆತಂಕಕ್ಕೀಡಾದ ಯುವತಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಆಕೆಯನ್ನು ಮಂಗಳೂರು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

 

 

ಆರೋಪಿ ಶಾರಿಕ್ ನ ವಿರುದ್ಧ ಭಾರತೀಯ ದಂಡ ಸಂಹಿತೆ 78(1)(i), 351(1 & 2) ಮತ್ತು 3(5) ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಆತನನ್ನು ಬಂಧಿಸಿದ್ದ ಸುರತ್ಕಲ್‌ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಆತನಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿತ್ತು. ಈ ಪ್ರಕರಣ ಸಂಬಂಧ ಮಂಗಳವಾರ(ಅ.29) ವಿಚಾರಣೆ ನಡೆಸಿದ ಮಂಗಳೂರು 2ನೇ ಜೆಎಂಎಫ್‌ಸಿ ನ್ಯಾಯಾಲಯ ಶಾರಿಕ್‌ ಗೆ ಜಾಮೀನು ಮಂಜೂರು ಮಾಡಿದೆ.

Leave a Reply

Your email address will not be published. Required fields are marked *

error: Content is protected !!