March 18, 2026

ಕಾವೇರಿ ನದಿಯ ದಡದಲ್ಲಿ ರಾಕೆಟ್ ಲಾಂಚರ್ ಪತ್ತೆ

0
image_editor_output_image-950169171-1730367290412.jpg

ತಮಿಳುನಾಡು: ತಿರುಚ್ಚಿ ಜಿಲ್ಲೆಯ ಕಾವೇರಿ ನದಿಯ ದಡದಲ್ಲಿ ರಾಕೆಟ್ ಲಾಂಚರ್ ಪತ್ತೆಯಾಗಿದ್ದು, ಇದೀಗ ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಸದ್ಯ ಪೊಲೀಸರು ಅದನ್ನು ಭಾರತೀಯ ಸೇನೆಗೆ ಹಸ್ತಾಂತರಿಸಿದ್ದಾರೆ.

ಬುಧವಾರದಂದು ಸಂಜೆ ಅಂದನಲ್ಲೂರು ದೇವಸ್ಥಾನ ಬಳಿ ಹರಿಯುವ ಕಾವೇರಿ ನದಿ ದಡದಲ್ಲಿ ರಾಕೆಟ್ ಲಾಂಚರ್ ಕಾಣಿಸಿದೆ. ದೇವಸ್ಥಾನಕ್ಕೆ ಭೇಟಿ ನೀಡಿದ ಭಕ್ತರಿಗೆ ಇದು ಮೊದಲು ಸಿಕ್ಕಿದೆ. ತಿಳಿ ನೀಲಿ ಮತ್ತು ಕಪ್ಪು ಲೋಹದ ವಸ್ತುವನ್ನು ಕಂಡ ಭಕ್ತರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಬಂದ ಪೊಲೀಸರು ರಾಕೆಟ್ ಲಾಂಚರ್ ಅನ್ನು 117 ಪದಾತಿ ದಳದ ಬೆಟಾಲಿಯನ್ಗೆ ಹಸ್ತಾಂತರಿಸಿದ್ದಾರೆ. ಸದ್ಯ ಈ ಲಾಂಚರ್ ಎಲ್ಲಿಂದ ಬಂತು? ಅದು ಹೇಗೆ ನದಿದಲ್ಲಿ ತೇಲಿ ಬಂತು? ಇವೆಲ್ಲದರ ಕುರಿತು ತನಿಖೆ ನಡೆಯುತ್ತಿದೆ.

Leave a Reply

Your email address will not be published. Required fields are marked *

error: Content is protected !!