ಸಮುದ್ರದ ನೀರಿನಾಳದಲ್ಲಿ ಮದುವೆಯಾದ ಜೋಡಿ! ಮದುವೆಯ ಫೋಟೋಗಳು ವೈರಲ್
ಸೌದಿ ಅರೇಬಿಯಾ: ದೇವಸ್ಥಾನದಲ್ಲಿ, ಸುಂದರವಾದ ಸ್ಥಳದಲ್ಲಿ ನವ ಜೋಡಿ ವಿವಾಹವಾಗುತ್ತಾರೆ. ಆದರೆ ಸೌದಿ ಅರೇಬಿಯಾದ ಜೋಡಿಯೊಂದು ಕೆಂಪು ಸಮುದ್ರದ ನೀರಿನಾಳದಲ್ಲಿ ( Underwater wedding ) ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಕುರಿತಾದ ಕೆಲವು ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಕ್ಯಾಪ್ಟನ್ ಫೈಸಲ್ ಫ್ಲೆಂಬನ್ ನೇತೃತ್ವದ ಸ್ಥಳೀಯ ಡೈವಿಂಗ್ ಗ್ರೂಪ್ ಈ ಜೋಡಿಯನ್ನು ಆಳ ಸಮುದ್ರಕ್ಕೆ ಕರೆದೊಯ್ದು ವಿವಾಹ ಮಾಡಿಸಿದೆ. ಸೌದಿಯ ಹಸನ್ ಅಬು ಅಲ್ ಓಲಾ ಮತ್ತು ಯಾಸ್ಮಿನ್ ಕೆಂಪು ಸಮುದ್ರದ ಆಳದಲ್ಲಿ ವಿಶಿಷ್ಟ ರೀತಿಯಲ್ಲಿ ಮದುವೆಯಾಗಿದ್ದು, ಇದು ಸೌದಿ ಅರೇಬಿಯಾದ ಮೊದಲ ಸಮುದ್ರದಾಳದಲ್ಲಿ ನಡೆದ ಮದುವೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ವಿವಾಹದ ಬಳಿಕ ಮಾತನಾಡಿದ ವರ, ‘ಇದು ನಿಜಕ್ಕೂ ಅಚ್ಚರಿಯ ಸಂಗತಿ. ನಾವು ವಿವಾಹವಾಗಲು ಬಯಸಿದಾಗ ಕ್ಯಾಪ್ಟನ್ ಫೈಸಲ್ ಮತ್ತು ತಂಡ ಸಮುದ್ರದ ಆಳದಲ್ಲಿ ವಿವಾಹವಾಗಲು ಪ್ರೋತ್ಸಾಹಿಸಿದರು. ಇದು ಸುಂದರವಾದ ಮತ್ತು ಮರೆಯಲಾಗದ ಅನುಭವ ನೀಡಿದೆ’ ಎಂದು ಹೇಳಿದ್ದಾರೆ.
ಮದುವೆ ನಡೆದು ಕೆಲವು ವರ್ಷಗಳ ನಂತ್ರ ಕೂಡಾ ಇದು ನಮಗೆ ಸದಾ ನೆನಪು ಉಳಿಯುವಂತೆ ಮದ್ವೆ ಆಗಬೇಕು ಎನ್ನುವುದು ಇಂದಿನ ನವ ಜೋಡಿಗಳ ಆಸೆ ಆಗಿರುತ್ತದೆ. ಹೀಗಾಗಿ ಕೆಲವು ಜೋಡಿಗಳು ಸುಂದರವಾದ ಸೆಟ್ಟಿಂಗ್, ಸೊಗಸಾದ ಉಡುಪು,ಈ ವಿಶೇಷ ದಿನವನ್ನು ಆಚರಿಸಲು ವಿಶಿಷ್ಟವಾದ ಸ್ಥಳಗಳನ್ನು ಹುಡುಕುತ್ತಾರೆ. ಆದರೆ ಇಲ್ಲೊಂದು ಜೋಡಿ ನೀರೊಳಗಿನ ವಿವಾಹವಾಗಿದ್ದಾರೆ.