June 29, 2026

ಫೋಟೊ ತೆಗೆಯುವಾಗ ಅಡ್ಡಬಂದ ವ್ಯಕ್ತಿಗೆ ಮಾರಣಾಂತಿಕ ಹಲ್ಲೆ

0
image_editor_output_image-1434548063-1728679617035.jpg

ಬೆಂಗಳೂರು: ಫೋಟೋ ತೆಗೆಯುವಾಗ ಅಡ್ಡಬಂದರೆಂದು ಹೆಚ್ಎಎಲ್ ಉದ್ಯೋಗಿಗೆ ರಕ್ತ ಬರುವಂತೆ ವ್ಯಕ್ತಿಯೋರ್ವ ಹಲ್ಲೆ ಮಾಡಿರುವಂತಹ ಘಟನೆ ಸೆ.29ರಂದು ಕಬ್ಬನ್ಪಾರ್ಕ್ನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಉತ್ತರ ಭಾರತದ ವ್ಯಕ್ತಿಯಿಂದ ಹೆಚ್ಎಎಲ್ ಡಿಫೆನ್ಸ್ ವಿಭಾಗದ ಟೆಕ್ನಿಷಿಯನ್ ಆಗಿರುವ ಉದ್ಯೋಗಿ ರವಿಕಿರಣ್ಗೆ ನಿಂದಿಸಿ ರಕ್ತ ಬರುವಂತೆ ಹಲ್ಲೆ ಮಾಡಿದ್ದಾರೆ. ಈ ಸಂಬಂಧ ಕಬ್ಬನ್ಪಾರ್ಕ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಸೆ.29ರಂದು ಮಧ್ಯಾಹ್ನ 3.30ಕ್ಕೆ ಕಬ್ಬನ್ಪಾರ್ಕ್ಗೆ ಬಂದಿದ್ದ ರವಿಕಿರಣ್, ಉತ್ತರ ಭಾರತದ ವ್ಯಕ್ತಿ ಫೋಟೋ ತೆಗೆಯುವಾಗ ಅಡ್ಡಹೋಗಿದ್ದರು. ನಾನು ಫೋಟೋ ತೆಗೆಯುವಾಗ ನೀನ್ಯಾಕೆ ಅಡ್ಡ ಬಂದೆ ಎಂದು ನಿಂದಿಸಿ, ಪಾರ್ಕ್ ನಿಮ್ಮಪ್ಪಂದ ಎಂದು ಬೈಯ್ದು ಕೈಯಿಂದ ರಕ್ತ ಬರುವಂತೆ ಹಲ್ಲೆ ನಡೆಸಿದ್ದಾರೆ. ಬಳಿಕ ಚಿಕಿತ್ಸೆ ಪಡೆದು ಕಬ್ಬನ್ಪಾರ್ಕ್ ಠಾಣೆಗೆ ರವಿಕಿರಣ್ ದೂರು ನೀಡಿದ್ದರು.

Leave a Reply

Your email address will not be published. Required fields are marked *

error: Content is protected !!