ಮದುವೆಯಾಗುವುದಾಗಿ ನಂಬಿಸಿ ಯುವತಿಯ ಅತ್ಯಾಚಾರ: ಕೆಎಸ್ಆರ್ಪಿ ಪೊಲೀಸ್ ವಿರುದ್ಧ FIR
ಕಲಬುರಗಿ: ಮದುವೆಯಾಗುವುದಾಗಿ ನಂಬಿಸಿ ಕೆಎಸ್ಆರ್ಪಿ ಪೊಲೀಸ್ ಯುವತಿ ಮೇಲೆ ಅತ್ಯಾಚಾರ ಎಸಗಿರುವುದು ವರದಿಯಾಗಿದೆ.
ಯಲ್ಲಾಲಿಂಗ ಮೇತ್ರಿ ಅತ್ಯಾಚಾರ ಎಸಗಿದ ಕೆಎಸ್ಆರ್ಪಿ ಪೊಲೀಸ್ ಸಿಬ್ಬಂದಿ. ಸಂತ್ರಸ್ತೆ ಯಲ್ಲಾಲಿಂಗ ಮೇತ್ರಿ ವಿರುದ್ಧ ಕಲಬುರಗಿ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಎಫ್ಐಆರ್ ದಾಖಲಾಗಿದೆ.
ಸಂತ್ರಸ್ತೆ ಹೈದರಾಬಾದ್ ನಿವಾಸಿಯಾಗಿದ್ದು, ಯುವತಿಗೆ ಆರೋಪಿ ಯಲ್ಲಾಲಿಂಗ ಇನ್ಸ್ಟಾಗ್ರಾಮ್ ಮೂಲಕ ಪರಿಚಯವಾಗಿದ್ದಾನೆ. ಇಬ್ಬರು ಸುಮಾರು ಐದು ತಿಂಗಳು ಇನ್ಸ್ಟಾಗ್ರಾಮ್ನಲ್ಲಿ ಮೇಸೆಜ್ ಮಾಡಿದ್ದಾರೆ. ಬಳಿಕ ಮೊಬೈಲ್ ನಂಬರ್ ಬದಲಾಯಿಸಿಕೊಂಡಿದ್ದಾರೆ.
ಇಬ್ಬರ ಸ್ನೇಹ ಪ್ರೀತಿಗೆ ತಿರುಗಿದೆ. ಆರೋಪಿ ಯಲ್ಲಾಲಿಂಗ ಸಂತ್ರಸ್ತೆಗೆ ಮದುವೆಯಾಗುವುದಾಗಿ ನಂಬಿಸಿದ್ದಾನೆ. ಆರೋಪಿ ಯಲ್ಲಾಲಿಂಗನ ಮಾತನ್ನು ಸಂತ್ರಸ್ತೆ ನಂಬಿದ್ದಾಳೆ. ಮದುವೆಯಾಗೋಣ ಬಾ ಎಂದು ಆರೋಪಿ ಯಲ್ಲಾಲಿಂಗ ಆಗಸ್ಟ್ 8 ರಂದು ಸಂತ್ರಸ್ತೆಯನ್ನು ಕಲಬುರಗಿ ಕರೆಸಿಕೊಂಡಿದ್ದಾನೆ.
ಆರೋಪಿ ಯಲ್ಲಾಲಿಂಗ ಮಾತು ನಂಬಿ ಸಂತ್ರಸ್ತೆ ಅದೇ ದಿನ ರಾತ್ರಿ ಕಲಬುರಗಿಗೆ ಬಂದಿದ್ದಾಳೆ. ಬಳಿಕ, ಆರೋಪಿ ಯಲ್ಲಾಲಿಂಗ ಆಕೆಯನ್ನು ಬೈಕ್ನಲ್ಲಿ ಕೂರಿಸಿಕೊಂಡು ಕಲಬುರಗಿ ಬಸ್ ನಿಲ್ದಾಣ ಎದುರಿನ ಖಾಸಗಿ ಲಾಡ್ಜ್ಗೆ ಕರೆದುಕೊಂಡು ಹೋಗಿದ್ದಾನೆ. ರೂಂನಲ್ಲಿ, ಆರೋಪಿ ಯಲ್ಲಾಲಿಂಗ ಸಂತ್ರಸ್ತೆಯನ್ನು ಸರಸಕ್ಕೆ ಕರೆದಿದ್ದಾನೆ. ಆಗ ಸಂತ್ರಸ್ತೆ ನಿರಾಕರಿಸಿದ್ದಕ್ಕೆ, ಆಕೆಯ ಮೇಲೆ ಇಡೀ ರಾತ್ರಿ ಅತ್ಯಾಚಾರ ಎಸಗಿದ್ದಾನೆ.





