ಮೌಂಟನ್ ವ್ಯೂ ಅಸ್ವಾಲಿಹಾ ಕಾಲೇಜ್ : ರಬೀಅ್ ಕಲಾ ಪ್ರತಿಭಾ ಕಾರ್ಯಕ್ರಮ ಸಮಾರೋಪ
ಪುತ್ತೂರು : ಸಾಲ್ಮರ ಮೌಂಟನ್ ವ್ಯೂ ಅಸ್ವಾಲಿಹಾ ವುಮೆನ್ಸ್ ಕಾಲೇಜ್ ವಿದ್ಯಾರ್ಥಿನಿಯರ ರಬೀಅ್ ಕಲಾ ಪ್ರತಿಭಾ ಕಾರ್ಯಕ್ರಮ ‘ಗ್ಲೋ-2ಕೆ24’ ಸಮಾರೋಪ ಸಮಾರಂಭವು ಕಾಲೇಜ್ ಸಭಾಂಗಣದಲ್ಲಿ ಜರಗಿತು.
ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಯು. ಮುಹಮ್ಮದ್ ಹಾಜಿ ಪಡೀಲ್ ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಮೌಂಟನ್ ವ್ಯೂ ಸಂಚಾಲಕರಾದ ಹಾಜಿ ಮುಹಮ್ಮದ್ ಸಾಬ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪುತ್ತೂರು ಅನ್ಸಾರುದ್ದೀನ್ ಜಮಾಅತ್ ಕಮಿಟಿ ಅಧ್ಯಕ್ಷ ಹಾಜಿ ಅಬ್ದುಲ್ ರಹಿಮಾನ್ ಅಝಾದ್ ದರ್ಬೆ ಶುಭ ಹಾರೈಸಿದರು. ಉದ್ಯಮಿಗಳಾದ ಉಮರ್ ಹಾಜಿ ಪಟ್ಟೆ ಅಜ್ಜಿಕಟ್ಟೆ , ಕೆ.ಎಸ್.ಅಬ್ದುಲ್ ನಾಸೀರ್ ಟಿಪ್ಪುನಗರ, ಮೌಂಟನ್ ವ್ಯೂ ಮದ್ರಸ ಶಿಕ್ಷಕ ನಝೀರ್ ಅರ್ಶದಿ, ಶಾಲಾ ಶಿಕ್ಷಕ ಅಶ್ರಫ್ ಮೊದಲಾದವರು ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಅತಿಥಿಗಳಾಗಿ ಆಗಮಿಸಿದ್ದ ಉದ್ಯಮಿ ಉಮರ್ ಹಾಜಿ ಪಟ್ಟೆ ಮತ್ತು ಅಬ್ದುಲ್ ನಾಸಿರ್ ಟಿಪ್ಪುನಗರ ಅವರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಕೆ.ಎಂ.ಎ.ಕೊಡುಂಗಾಯಿ ಫಾಝಿಲ್ ಹನೀಫಿ ಅವರು ಸ್ವಾಗತಿಸಿ ,ಪ್ರಸ್ತಾವನೆ ಗೈದರು. ಶಾಲಾ ಶಿಕ್ಷಕ ಅಬ್ದುಲ್ ರವೂಫ್ ವಿವಿಧ ಕಾರ್ಯಕ್ರಮ ನಿರ್ವಹಿಸಿ ಕೊನೆಗೆ ವಂದಿಸಿದರು.
ಈ ಕಾರ್ಯಕ್ರಮದ ಬಳಿಕ ಕಾಲೇಜ್ ಉಪನ್ಯಾಸಕಿಯರಾದ ಮಿಶ್ರಿಯಾ ಅಸ್ವಾಲಿಹಾ ಮತ್ತು ಸಾಜಿದಾ ಅವರ ನೇತ್ರತ್ವದಲ್ಲಿ ಕಾಲೇಜ್ ವಿದ್ಯಾರ್ಥಿನಿಯರ ವಿವಿಧ ಕಲಾ ಪ್ರತಿಭಾ ಕಾರ್ಯಕ್ರಮ ನಡೆಯಿತು. ಕಳೆದ 15 ದಿನಗಳ ಕಾಲ ನಡೆದ ‘ಗ್ಲೋ-2ಕೆ24’ ವಿವಿಧ ಕಲಾ ಪ್ರತಿಭಾ ಸ್ಪರ್ಧಾ ಕಾರ್ಯಕ್ರಮದಲ್ಲಿ ಪ್ರಥಮ ಸ್ಥಾನ ಪಡೆದ “ಬೋಲಿಗ್ರಫಿ” ತಂಡ ಮತ್ತು ದ್ವಿತೀಯ ಸ್ಥಾನ ಪಡೆದ “ಲಾಪಿಝ್” ತಂಡಕ್ಕೆ ಟ್ರೋಫಿ ಹಾಗೂ ವಿವಿಧ ಸ್ಪರ್ಧಾ ಕಾರ್ಯಕ್ರಮಗಳಲ್ಲಿ ವಿಜೇತರಾದ ವಿದ್ಯಾರ್ಥಿನಿಯರಿಗೆ ಮತ್ತು ಫಾಳಿಲಾ ಮತ್ತು ಅಸ್ವಾಲಿಹಾ ಶರೀಅತ್ ವಾರ್ಷಿಕ ಪರೀಕ್ಷೆ ಹಾಗೂ ದ್ವಿತೀಯ ಪಿಯು ಪರೀಕ್ಷೆ ಯಲ್ಲಿ ಡಿಸ್ಟಿಂಕ್ಷನ್ ಪಡೆದ ವಿದ್ಯಾರ್ಥಿನಿಯರಿಗೆ ಸ್ಮರಣಿಕೆ ಮತ್ತು ವಿವಿಧ ಬಹುಮಾನ ವಿತರಣೆಯು ಉಪನ್ಯಾಸಕಿಯರ ನೇತೃತ್ವದಲ್ಲಿ ನಡೆಯಿತು.





