ವಶಪಡಿಸಿಕೊಂಡಿದ್ದ ಮಾಲನ್ನು ವಾಪಸ್ ನೀಡದೇ ದುರುಪಯೋಗ: ಪೊಲೀಸ್ ಇನ್ ಸ್ಪೆಕ್ಟರ್ ವಿರುದ್ಧವೇ ಎಫ್‌ಐಆರ್ ದಾಖಲು
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಓರ್ವ ಪೊಲೀಸ್ ಇನ್ಸ್ ಪೆಕ್ಟರ್ ವಿರುದ್ಧವೇ ಎಫ್‌ಐಆರ್ ದಾಖಲಾಗಿರುವ ಘಟನೆ ನಡೆದಿದೆ.
ಇನ್ಸ್ ಪೆಕ್ಟರ್ ಹಿತೇಂದ್ರ ಎಂ.ಎಸ್ ವಿರುದ್ಧ ಬೆಂಗಳೂರಿನ ಜೆ.ಪಿ.ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಈ ಹಿಂದೆ ಜೆ.ಪಿ.ನಗರ ಠಾಣೆಯಲ್ಲಿಯೇ ಇನ್ಸ್ ಪೆಕ್ಟರ್ ಆಗಿದ್ದ ಹಿತೇಂದ್ರ, ಕೆಲ ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದ ಮಾಲನ್ನು ವಾಪಾಸ್ ನೀಡದೇ ದುರುಪಯೋಗಿಸಿ ಕೊಂಡಿರುವುದು ಬೆಳಕಿಗೆ ಬಂದಿದೆ. ಹೀಗಾಗಿ ಸದ್ಯ ಜೆಪಿ ನಗರ ಪೊಲೀಸ್ ಠಾಣೆಯ ಮಾಜಿ ಇನ್ಸ್ಪೆಕ್ಟರ್ ವಿರುದ್ದ ಹಾಲಿ ಇನ್ಸ್ಪೆಕ್ಟರ್ ರಾಧಾಕೃಷ್ಣ ಎಫ್ಐಆರ್ ದಾಖಲಿಸಿದ್ದಾರೆ.





