March 21, 2026

ಹೊತ್ತಿ ಉರಿದ ಶಾಲಾ ಬಸ್: ವಿದ್ಯಾರ್ಥಿಗಳು ಸೇರಿದಂತೆ 25 ಮಂದಿ ಸಜೀವ ದಹನ

0
image_editor_output_image-954495934-1727774981913.jpg

ಥಾಯ್ಲೆಂಡ್‌ : ಶಾಲಾ ಬಸ್ಸಿಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ವಿದ್ಯಾರ್ಥಿಗಳು ಸೇರಿದಂತೆ 25 ಮಂದಿ ಸಜೀವ ದಹನಗೊಂಡಿರುವ ಘಟನೆ ಥಾಯ್ಲೆಂಡ್‌ನ ಬ್ಯಾಂಕಾಕ್‌ನ ಪಥುಮ್ ಥಾನಿ ಪ್ರಾಂತ್ಯದಲ್ಲಿ ಮಂಗಳವಾರ ಸಂಭವಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಬಸ್ಸು ಮಧ್ಯ ಉತೈ ಥಾನಿ ಪ್ರಾಂತ್ಯದಿಂದ ಬ್ಯಾಂಕಾಕ್‌ಗೆ ಶಾಲಾ ಪ್ರವಾಸಕ್ಕೆ ವಿದ್ಯಾರ್ಥಿಗಳು ಸೇರಿ 44 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದಾಗ ರಾಜಧಾನಿಯ ಉತ್ತರ ಉಪನಗರವಾದ ಪಾಥುಮ್ ಥಾನಿ ಪ್ರಾಂತ್ಯದಲ್ಲಿ ಮಧ್ಯಾಹ್ನದ ಸುಮಾರಿಗೆ ಟಯರ್ ಸ್ಪೋಟಗೊಂಡು ತಡೆಬೇಲಿಗೆ ಗುದ್ದಿದೆ ಪರಿಣಾಮ ಬಸ್ಸಿಗೆ ಬೆಂಕಿ ಹೊತ್ತಿಕೊಂಡು ಈ ದುರಂತ ಸಂಭವಿಸಿದೆ ಎಂದು ಸಾರಿಗೆ ಸಚಿವ ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!