ಗೆಳತಿಯ ಮನೆಗೆ ತೆರಳಿದ್ದ ಯುವತಿ ನಾಪತ್ತೆ
ಅಂಕೋಲಾ: ತನ್ನ ಕುಟುಂಬದೊಂದಿಗೆ ವಾಸವಾಗಿದ್ದ ಯುವತಿಯೋರ್ವಳು, ಗೆಳತಿಯ ಮನೆಗೆ ಹೋಗಿ ಬರುತ್ತೇನೆ ಎಂದು ಮನೆಯಿಂದ ºಹೋದವಳು, ಮನೆಗೆ ವಾಪಸ್ಸಾಗದೇ ಕಾಣೆಯಾದ ಘಟನೆ ತಾಲೂಕಿನ ಪುರಸಭೆ ವ್ಯಾಪ್ತಿಯ ಕೋಟೆವಾಡದಲ್ಲಿ ನಡೆದಿದೆ. ಸ್ಥಳೀಯ ನಿವಾಸಿ ಅನ್ಸೀಫಾ ಇಮ್ತಿಯಾಜ್ ಶೇಖ್ (23 ) ಕಾಣೆಯಾದ ಯುವತಿಯಾಗಿದ್ದಾಳೆ.
ಬಿಕಾಂ ಪದವಿ ಪೂರ್ಣಗೊಳಿಸಿ ಮನೆಯಲ್ಲಿಯೇ ಉಳಿದು ಕೊಂಡಿದ್ದ ಈಕೆ ತನ್ನ ಸ್ನೇಹಿತೆಯ ಮನೆಗೆ ಹೋಗಿ ಬರುವುದಾಗಿ ಅಂತ ಹೇಳಿ, ಕೋಟೆವಾಡದಲ್ಲಿರುವ ಮನೆಯಿಂದ ಹೊರಗೆ ಹೋದವಳು, ಈ ವರೆಗೂ ಮನೆಗೆ ವಾಪಸ್ ಬಂದಿಲ್ಲ.
ಕಾಣೆಯಾದ ತನ್ನ ಮಗಳನ್ನು ಹುಡುಕಿ ಕೊಡುವಂತೆ ಅವಳ ತಾಯಿ ಸೌಧಾ ಕೋಂ ಇಮ್ತಿಯಾಜ ಶೇಖ್ ಎನ್ನುವವರು,ಅಂಕೋಲಾ ಪೊಲೀಸ್ ಠಾಣೆ ಯಲ್ಲಿ ದೂರು ದಾಖಲಿಸಿದ್ದಾರೆ.
ಅಂಕೋಲಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪತ್ತೆಗೆ ಮುಂದಾಗಿದ್ದಾರೆ.
ಈ ಮೇಲಿನ ಫೋಟೋದಲ್ಲಿರುವ ಯುವತಿ ಎಲ್ಲಿಯಾದರೂ ಕಂಡು ಬಂದಲ್ಲಿ,ಅಥವಾ ಈ ಕುರಿತು ಏನಾದರೂ ಮಾಹಿತಿ ಇದ್ದಲ್ಲಿ ಅಂಕೋಲಾ ಪೊಲೀಸ್ ಠಾಣೆ(9480805250, 9480805268) ಇಲ್ಲವೇ ತಮ್ಮ ಹತ್ತಿರದ ಪೊಲೀಸ್ ಠಾಣೆಗೆ ತಿಳಿಸಲು ಅಂಕೋಲಾ ಪೋಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.





