February 3, 2026

ಸೌದಿ ಅರೇಬಿಯಾದಲ್ಲಿ ಹೃದಯಾಘಾತದಿಂದ ಗಂಗೊಳ್ಳಿಯ ನಿವಾಸಿ ಮೃತ್ಯು

0
image_editor_output_image-908613760-1727328554431.jpg

ಗಂಗೊಳ್ಳಿ: ಸ್ಥಳೀಯ ಜಾಮಿಯಾ ಮೊಹಲ್ಲಾ ಪೊಲೀಸ್ ಚೆಕ್ ಪೋಸ್ಟ್ ಎದುರಿನ ನಿವಾಸಿ ಬಷೀರ್ ಅಹ್ಮದ್ ಎಂಬುವವರ ಪುತ್ರ ಮುಬಾಶೀರ್ ಬಷೀರ್(30) ಇಂದು ಸೌದಿ ಅರೇಬಿಯಾದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂಬ ಮಾಹಿತಿ ದೊರೆತಿದ್ದು, ಇದನ್ನು ಸೌದಿಯಲ್ಲಿ ಇರುವ ಸ್ಥಳೀಯ ಅನಿವಾಸಿ ಭಾರತೀಯರು ಹಾಗೂ ಗಂಗೊಳ್ಳಿಯಲ್ಲಿ ಇರುವ ಅವರ ಕುಟುಂಬಸ್ಥರು ದೃಢಪಡಿಸಿದ್ದಾರೆ.

2 ವರುಷಗಳ ಹಿಂದೆ ಮಹಾರಾಷ್ಟ್ರದ ಪೂನಾ ಮೂಲದ ಯುವತಿಯನ್ನು ಮುಬಾಶೀರ್ ಬಷೀರ್ ಅವರು ವಿವಾಹವಾಗಿದ್ದರು.

ಸೌದಿಯಲ್ಲಿ ಉದ್ಯೋಗದಲ್ಲಿದ್ದ ಅವರು, ಪತ್ನಿಯೊಂದಿಗೆ ಅಲ್ಲಿಯೇ ವಾಸವಾಗಿದ್ದರು. ಪ್ರಾಥಮಿಕ ಶಿಕ್ಷಣವನ್ನು ಕುಂದಾಪುರ ಹೆಚ್ ಎಂಎಂ ಶಾಲೆ, ಪ್ರೌಢ ಶಿಕ್ಷಣವನ್ನು ವಿಕೆಆರ್ ಆಂಗ್ಲ ಮಾಧ್ಯಮ ಶಾಲೆ, ಪಿಯು ಶಿಕ್ಷಣವನ್ನು ಭಂಡಾರ್ ಕರ್ಸ್ ಕಾಲೇಜು, ತದನಂತರ ಇಂಜಿನಿಯರಿಂಗ್ ಪದವಿಯನ್ನು ಭಟ್ಕಳದ ಅಂಜುಮನ್ ಕಾಲೇಜು ಹಾಗೂ ಚೆನ್ನೈಯ ಕಾಲೇಜಿನಲ್ಲಿ ಮಾಡಿದ್ದರು.

Leave a Reply

Your email address will not be published. Required fields are marked *

You may have missed

error: Content is protected !!