February 3, 2026

ನಟಿಯ ಅತ್ಯಾಚಾರ:‌ ಖ್ಯಾತ ಯೂಟ್ಯೂಬರ್‌ ವಿರುದ್ಧ FIR ದಾಖಲು

0
image_editor_output_image1637045258-1727257879148.jpg

ಹೈದರಾಬಾದ್:‌ ಖ್ಯಾತ ಯೂಟ್ಯೂಬರ್‌ ಹಾಗೂ ಸೋಷಿಯಲ್ ಮೀಡಿಯಾ ಇನ್ಫ್ಲೂಯೆನ್ಸರ್ ಹರ್ಷ ಸಾಯಿ ವಿರುದ್ಧ ನಟಿಯೊಬ್ಬರು ಅತ್ಯಾಚಾರ ಹಾಗೂ ವಂಚನೆಯ ಆರೋಪವನ್ನು ಮಾಡಿ ದೂರು ದಾಖಲಿಸಿದ್ದಾರೆ ಎಂದು ವರದಿಯಾಗಿದೆ.

ಮುಂಬೈಯಿಂದ ಹೈದರಾಬಾದ್‌ಗೆ ಸಿನಿಮಾದಲ್ಲಿ ನಟಿಸುವ ಅವಕಾಶವನ್ನು ಹುಡುಕಿ ಬಂದ ಯುವತಿ ಕೆಲ ಸಿನಿಮಾಗಳಲ್ಲಿ ನಟಿಸಿದ್ದಾಳೆ. ತೆಲುಗು‌ ಬಿಗ್‌ ಬಾಸ್ ರಿಯಾಲಿಟಿ ಶೋನಲ್ಲಿ ಭಾಗಿಯಾಗಿದ್ದ ಆಕೆಗೆ ಖಾಸಗಿ ಪಾರ್ಟಿಯೊಂದಲ್ಲಿ ಹರ್ಷ ಸಾಯಿ ಪರಿಚಯವಾಗಿದ್ದರು.

ಇದಾದ ಬಳಿಕ ಇಬ್ಬರ ನಡುವೆ ಆತ್ಮೀಯತೆ ಹೆಚ್ಚಾಗಿದೆ. ಯುವತಿಗೆ ಹರ್ಷ ಸಾಯಿ ಮದುವೆ ಆಗುವುದಾಗಿ ಭರವಸೆ ನೀಡಿ ಅತ್ಯಾಚಾರವೆಸಗಿದ್ದಾನೆ ಎಂದು ಯುವತಿ ದೂರಿನಲ್ಲಿ ಹೇಳಿರುವುದಾಗಿ ರಾಜೇಂದ್ರನಗರ ಡಿಸಿಪಿ ಶ್ರೀನಿವಾಸ್ ಹೇಳಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!