ಕೊಲ್ಕತ್ತಾದಲ್ಲಿ ನಡೆದ ಇಂಟರ್ ನ್ಯಾಷನಲ್ ಬಾಡಿ ಬಿಲ್ಡಿಂಗ್: ವಿಟ್ಲದ ಸುನೀಲ್ ಪಾಯಸ್ಗೆ 2 ಚಿನ್ನದ ಪದಕ
ಕೊಲ್ಕತ್ತಾ: ಕೊಲ್ಕತ್ತಾದ ಚಂದನ್ ನಗರದ ರವೀಂದ್ರ ಭವನದಲ್ಲಿ ನಡೆದ ಇಂಟರ್ ನ್ಯಾಷನಲ್ ಬಾಡಿ ಬಿಲ್ಡಿಂಗ್ ಪಂದ್ಯಾಟದಲ್ಲಿ ವಿಟ್ಲದ ಮಂಗಳಪದವು ನಿವಾಸಿ ಸುನೀಲ್ ಪಾಯಸ್ ಅವರು
(INBA) ಜೂನಿಯರ್ ಮಾಸ್ಟರ್ 30+ ನಲ್ಲಿ ಚಿನ್ನದ ಪದಕ, ಸೀನಿಯರ್ ಮಾಸ್ಟರ್ 40+ ನಲ್ಲಿ ಚಿನ್ನದ ಪದಕಗಳನ್ನು ಪಡೆದಿದ್ದಾರೆ.
ಅದೇ ರೀತಿ ಮಾಸ್ಟರ್ಸ್ ಓವರ್ ಆಲ್ ಚಾಂಪಿಯನ್, ಪುರುಷರ ಬಾಡಿಬಿಲ್ಡಿಂಗ್ ಓಪನ್ ನಲ್ಲಿ ಸಿಲ್ವರ್ ಪದಕಗಳನ್ನು ಪಡೆದಿದ್ದಾರೆ.
ಇವರು ವಿಟ್ಲದ ಫಿಟ್ ನೆಸ್ ಮಲ್ಟಿ ಜಿಮ್ ನ ಮಾಲಕರಾಗಿದ್ದಾರೆ.




