ಹಿದಾಯ ಫೌಂಡೇಶನ್ ಕೇಂದ್ರ ಸಮಿತಿಯ ವಾರ್ಷಿಕ ಮಹಾಸಭೆ : ಅಧ್ಯಕ್ಷರಾಗಿ ಹನೀಫ್ ಹಾಜಿ ಗೋಳ್ತಮಜಲು

ಹಿದಾಯ ಕೇಂದ್ರ ಸಮಿತಿಯ ವಾರ್ಷಿಕ ಮಹಾಸಭೆಯು ಮಂಗಳೂರಿನ ಅಲ್ ಇಹ್ಸಾನ್ ಸಭಾಂಗಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಮೊಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು ವಹಿಸಿದರು. ವೀಕ್ಷಕರಾಗಿ ಟ್ರಸ್ಟ್ ನ ನಿಕಟಪೂರ್ವ ಚೇರ್ಮ್ಯಾನ್ ಮಾನ್ಸೂರ್ ಅಹಮದ್ ಮತ್ತು ಕಾರ್ಯದರ್ಶಿ ಅಬ್ಬಾಸ್ ಉಚ್ಚಿಲ್ ಭಾಗವಹಿಸಿದ್ದರು. ಉಪಾಧ್ಯಕ್ಷ ಮಕ್ಬೂಲ್ ಅಹಮದ್ ಕಿರಾತ್ ಪಠಿಸಿದರು. ಮತ್ತೋರ್ವ ಉಪಾಧ್ಯಕ್ಷ ಆಸೀಫ್ ಇಕ್ಬಾಲ್ ಸ್ವಾಗತಿಸಿದರು. ಸಂಸ್ಥೆಯ ಈ ಸಾಲಿನ ಮತ್ತು ಗ್ಲೋಬಲ್ ಮೀಟ್ ನಂತರದ ಚಟುವಟಿಕೆಗಳ ವರದಿಯನ್ನು ಕಾರ್ಯದರ್ಶಿ ಮಂಡಿಸಿದರು.
ಬಳಿಕ ಸದಸ್ಯರಿಂದ ಅನಿಸಿಕೆ ಪಡೆಯಲಾಯಿತು. ವಿವಿಧ ವಿಷಯಗಳ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು. ಮೊಹಮ್ಮದ್ ಹನೀಫ್ ಹಾಜಿ ತಮ್ಮ ಅಧ್ಯಕ್ಷೀಯ ನುಡಿಗಳನ್ನಾಡಿದರು. ಬಳಿಕ ಹಾಲೀ ಸಮಿತಿಯನ್ನು ಬರ್ಕಾಸ್ತುಗೊಳಿಸಲಾಯಿತು.
ವೀಕ್ಷಕರಾದ ಮನ್ಸೂರು ಅಹಮದ್ ಮತ್ತು ಅಬ್ಬಾಸ್ ಉಚ್ಚಿಲ್ ತಮ್ಮ ಮಾತುಗಳನ್ನಾಡಿ ಸಂಸ್ಥೆಯ ಬಲವರ್ಧನೆಗೆ ಸದಸ್ಯರು ಯಾವ ರೀತಿ ತಮ್ಮ ಕೊಡುಗೆಗಳನ್ನು ನೀಡಬಹುದು ಎಂದು ಮನವರಿಕೆ ಮಾಡಿದರು.

ಬಳಿಕ ನೂತನ ಸಾಲಿಗೆ ನೂತನ ಕಾರ್ಯಕಾರಿ ಸಮಿತಿಯನ್ನು ಆರಿಸಲಾಯಿತು.
ಅಧ್ಯಕ್ಷರಾಗಿ ಮೊಹಮ್ಮದ್ ಹನೀಫ್ ಹಾಜಿ, ಉಪಾಧ್ಯಕ್ಷರಾಗಿ ಮಕ್ಬೂಲ್ ಅಹಮದ್, ಆಸೀಫ್ ಇಕ್ಬಾಲ್, ಇದ್ದಿನ್ ಕುಂಞ , ಕಾರ್ಯದರ್ಶಿಯಾಗಿ ಶೇಕ್ ಇಸಾಕ್ ಕಡಬ, ಜೊತೆ ಕಾರ್ಯದರ್ಶಿಯಾಗಿ ಅಬ್ದುಲ್ ಹಕೀಂ ಕಲಾಯಿ, ಮಾಧ್ಯಮ ಕಾರ್ಯದರ್ಶಿಯಾಗಿ ಆಶೀಕ್ ಕುಕ್ಕಾಜೆ ಆಯ್ಕೆಯಾದರು.
ಆಡಳಿತಾಧಿಕಾರಿಯಾಗಿ ಆಬಿದ್ ಅಸ್ಗರ ಕಾರ್ಯನಿರ್ವಹಿಸುವರು. ಮಹಾಸಭೆಯಲ್ಲಿ ಮೊಹಮ್ಮದ್ ಹನೀಫ್ ಹಾಜಿ, ಆಬಿದ್ ಅಸ್ಗರ್
ಅಬ್ದುಲ್ ರಝಾಕ್, ಮಕ್ಬೂಲ್ ಅಹಮದ್ ಕುದ್ರೋಳಿ, ಆಸೀಫ್ ಇಕ್ಬಾಲ್, ಕೆ.ಎಸ್ ಅಬೂಬಕ್ಕರ್,
ಅಬ್ದುಲ್ ಹಕೀಂ ಕಲಾಯಿ, ಪಿ.ಮೊಹಮ್ಮದ್, ಶೇಕ್ ಇಸಾಕ್, ಅಬ್ದುಲ್ ಹಮೀದ್ ಜಿ, ಇಬ್ರಾಹಿಂ ಪರ್ಲಿಯಾ, ಜುನೈದ್ ಬಂಟ್ವಾಳ
ಶರೀಪ್ ಮುಕ್ರಂಪಾಡಿ, ಖಲೀಲ್ ಅಹಮದ್, ಅಬ್ದುಲ್ ರಹಿಮಾನ್ ಯೂನಿಕ್, ಸಾದಿಕ್ ಹಸನ್, ಇದ್ದಿನ್ ಕುಂಞಿ, ಇಲ್ಯಾಸ್ ಕಕ್ಕಿಂಜೆ
ಹಕೀಂ ಸುನ್ನತ್ ಕೆರೆ, ಅಬೂಬಕ್ಕರ್, ಸಿದ್ದೀಕ್ ಮಂಗಳೂರು, ಅಬ್ದುಲ್ ರಹಿಮಾನ್ ಬಕ್ಷ್, ಬಿ ಎಂ ತುಂಬೆ,
ಅಬ್ದುಲ್ ರಝಾಕ್ ಕುಪ್ಪೆಪದವು,
ಅಬ್ದುಲ್ಲಾ ಮಂಗಳೂರು, ಆಶೀಕ್ ಕುಕ್ಕಾಜೆ, ಹಂಝ ಬಸ್ತಿ ಕೋಡಿ
ಬಶೀರ್ ವಗ್ಗ, ರಶೀದ್ ಕಕ್ಕಿಂಜೆ
ಉಮ್ಮರ್ ಕರಾವಳಿ, ಜಬ್ಬಾರ್ ಬೆಂಗರೆ, ಝಿಯಾವುದ್ದೀನ್, ಇಸ್ಮಾಯಿಲ್ ನೆಲ್ಯಾಡಿ ಉಪಸ್ಥಿತರಿದ್ದರು.