ವರದಕ್ಷಿಣೆ ಕಿರುಕುಳಕ್ಕೆ ಮನವೊಂದು ಮಹಿಳೆ ಆತ್ಮಹತ್ಯೆ
ಪುಣೆ: ವರದಕ್ಷಿಣೆ ಕಿರುಕುಳಕ್ಕೆ ಮನವೊಂದು ಮಹಿಳೆಯಿಬ್ಬರು ನೇಣಿಗೆ ಶರಣಾಗಿರುವ ಘಟನೆ ಇತ್ತೀಚೆಗೆ ಪುಣೆಯಲ್ಲಿ ನಡೆದಿರುವುದು ವರದಿಯಾಗಿದೆ.
ಐಐಟಿ ಇಂಜಿನಿಯರ್ ಆಗಿದ್ದ 24ರ ಹರೆಯದ ವೈಷ್ಣವಿ ಓಂಕಾರ್ ಗಿಟ್ರೆ ಆತ್ಮಹತ್ಯೆಗೆ ಶರಣಾದ ಮಹಿಳೆ.
ಮಗಳ ಸಾವಿಗೆ ಪತಿ ಮತ್ತು ಆತನ ಮನೆಯವರ ನಿರಂತರ ಕಿರುಕುಳವೇ ಕಾರಣವೆಂದು ಮೃತ ಮಹಿಳೆಯ ಕುಟುಂಬಸ್ಥರು ಆರೋಪಿಸಿದ್ದಾರೆ.
ವೈಷ್ಣವಿ ಅವರನ್ನು ಈ ವರ್ಷದ ಮೇ 9 ರಂದು 28 ವರ್ಷದ ಓಂಕಾರ್ ಸಂಜಯ್ ಗಿಟ್ರೆ ಅವರಿಗೆ ಕೊಟ್ಟು ವಿವಾಹ ಮಾಡಿಕೊಡಲಾಗಿತ್ತು. ಮದುವೆಗಾಗಿ ಸುಮಾರು 45 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದ್ದಲ್ಲದೆ, ಉಡುಗೊರೆಯಾಗಿ 116.64 ಗ್ರಾಂ ಚಿನ್ನವನ್ನು ನೀಡಿದ್ದಾಗಿ ಮೃತಳ ಕುಟುಂಬಸ್ಥರು ಹೇಳಿದ್ದಾರೆ.





