ವಿಟ್ಲ ಜೆಸಿಐ ವತಿಯಿಂದ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ತರಬೇತಿ ಸಪ್ತಾಹ ಶ್ರಾವಣ 7ನೇ ದಿನದ ಕಾರ್ಯಕ್ರಮ
ಜೆಸಿಐ ವಿಟ್ಲ ವತಿಯಿಂದ ತರಬೇತಿ ಸಪ್ತಾಹ “ಶ್ರಾವಣ ದ 7ನೇ ಕೊನೆ ದಿನದ ಕಾರ್ಯಕ್ರಮ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆ ವಿಟ್ಲದಲ್ಲಿ ಜೇಸಿ. ಸಂತೋಷ್ ಶೆಟ್ಟಿ ಅಧ್ಯಕ್ಷೆತೆಯಲ್ಲಿ ನಡೆಯಿತು.
ಮುಖ್ಯ ಅತಿಥಿಗಳಾಗಿ ಪೂರ್ವ ವಲಯ ಅಧ್ಯಕ್ಷರು, ಜೇಸಿಸ್ ಶಾಲೆಯ ಕಾರ್ಯದರ್ಶಿ ಆದ ಜೆಸಿ. ಮೋಹನ್, ಪೂರ್ವ ಅಧ್ಯಕ್ಷರು, ಜೇಸಿಸ್ ಶಾಲೆಯ ನಿರ್ದೇಶಕರು ಆದ ಜೇಸಿ. ಹಸನ್ ವಿಟ್ಲ, ಶಾಲಾ ಪ್ರಾಂಶುಪಾಲರಾದ ಜಯರಾಮ್ ರೈ, ಆಡಳಿತ ಅಧಿಕಾರಿ ಆದ ಜೇಸಿ. ರಾಧಾಕೃಷ್ಣ ಪಾಲ್ಗೊಂಡರು. ತರಬೇತುದಾರರಾದ ಜೇಸಿ. ಅಣ್ಣಪ್ಪ ಸಾಸ್ಥಾನ ತರಬೇತಿ ನಡೆಸಿಕೊಟ್ಟರು.. ಹಾಗೂ ಸಂಸ್ಥೆಯ ಕಾರ್ಯದರ್ಶಿ ಜೇಸಿ.ಮುರಳಿ ಪ್ರಸಾದ್,ಜೇಸಿ ಮೋನಪ್ಪ ಗೌಡ, ಜೇಸಿ. ಹೇಮಲತಾ ಉಪಸ್ಥಿತರಿದ್ದರು.







