ಉಡುಪಿ: ಅಪಾರ್ಟ್ ಮೆಂಟ್ ನಲ್ಲಿ ಕಳವು, ಇಬ್ಬರು ಆರೋಪಿಗಳ ಬಂಧನ
ಉಡುಪಿ: ಕಳವು ಪ್ರಕರಣದ ಆರೋಪಿಗಳಿಬ್ಬರನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.
ಮಣಿಪಾಲ ಠಾಣಾ ವ್ಯಾಪ್ತಿಯ ವಿದ್ಯಾರತ್ನ ನಗರದಲ್ಲಿ ಇರುವ ಪ್ರಿನ್ಸೆಸ್ ಕೀರ್ತಿ ಅಪಾರ್ಟ್ ಮೆಂಟ್ ನಲ್ಲಿ ವಾಸವಿರುವ ಆಕಾಶ್ ಸಿ ಸೂರ್ಯ ವಂಶಿ ಎಂಬವರ ರೂಮಿನಲ್ಲಿ ಸುಮಾರು 4 ಲಕ್ಷ ರೂಪಾಯಿ ಮೌಲ್ಯದ ಎರಡು ಲ್ಯಾಪ್ ಟಾಪ್ ಮತ್ತು ಆ್ಯಪಲ್ ಕಂಪನಿಯ ಒಂದು ಐಪಾಡ್ ನ್ನು ಆರೋಪಿಗಳು ಕದ್ದಿದ್ದರು.
ಆಂಧ್ರ ಪ್ರದೇಶದ ಪಿ. ಕಾರ್ತೀಕ್(28) ಮತ್ತು ತಮಿಳುನಾಡಿನ ಬಾಲನ್ ಗೋವಿಥಾನ್(34) ಬಂಧಿತರು. ಇವರನ್ನು ಉಡುಪಿ ಜಿಲ್ಲೆಯ ಕಟಪಾಡಿ ಬಸ್ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಅವರಿಂದ ಕಳವಾದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





