ಗೋ ಸಾಗಾಣಿದಾರ ಎಂದು ಶಂಕಿಸಿ ಗುಂಡಿಕ್ಕಿ ಕೊಂದ ನಕಲಿ ಗೋರಕ್ಷಕರು: PUC ವಿದ್ಯಾರ್ಥಿ ಆರ್ಯನ್ ಮಿಶ್ರಾ ಸಾವು
ಹರ್ಯಾಣ: ಗೋ ಸಾಗಾಣಿದಾರ ಆರೋಪಿಸಿ ಎಂದು ಪಿಯುಸಿ ವಿಧ್ಯಾರ್ಥಿಯನ್ನು ನಕಲಿ ಗೋರಕ್ಷಕರು ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ಹರಿಯಾಣದಲ್ಲಿ ನಡೆದಿದೆ.
ಹರಿಯಾಣದ ಫರಿದಾಬಾದ್ ನಲ್ಲಿ ಆಗಸ್ಟ್ 23 ರಂದು ಈ ಘಟನೆ ನಡೆದಿದೆ. ಹತ್ಯೆಯಲ್ಲಿ ನಕಲಿ ಗೋಸಂರಕ್ಷಣಾ ಗುಂಪಿಗೆ ಸೇರಿದ ಐವರು ದಾಳಿಕೋರರನ್ನು ಪೊಲೀಸರು ಬಂಧಿಸಿದ್ದಾರೆ. ಆರ್ಯನ್ ಮಿಶ್ರಾ ಎಂಬ ಬಾಲಕನನ್ನು ಗೋರಕ್ಷಾ ಗ್ಯಾಂಗ್ ಗುಂಡಿಕ್ಕಿ ಹತ್ಯೆ ಮಾಡಿತ್ತು.
ಕೊಲೆ ಆರೋಪದಲ್ಲಿ ಅನಿಲ್ ಕೌಶಿಕ್, ವರುಣ್, ಕೃಷ್ಣ, ಆದೇಶ್ ಮತ್ತು ಸೌರಭ್ ಅರೆಸ್ಟ್ ಆಗಿದ್ದಾರೆ. ಆರ್ಯನ್ ಮಿಶ್ರಾ ತನ್ನ ಸ್ನೇಹಿತರೊಂದಿಗೆ ನೂಡಲ್ಸ್ ತಿನ್ನಲು ಪಟ್ಟಣಕ್ಕೆ ಬಂದಾಗ ಈ ದಾಳಿ ನಡೆದಿದ್ದು, 30 ಕಿ.ಮೀ.ವರೆಗೆ ಕಾರಿನಲ್ಲಿ ಹಿಂಬಾಲಿಸಿದ ದುಷ್ಕರ್ಮಿಗಳು ವಿದ್ಯಾರ್ಥಿಯನ್ನು ಹತ್ಯೆ ಮಾಡಿದ್ದಾರೆ.





