December 18, 2025

ವಿಟ್ಲದ ಖಾಸಗಿ ಬಸ್ ನಿಲ್ದಾಣದಲ್ಲಿ ನೂತನವಾಗಿ CENTER POINT ಗೃಹೋಪಯೋಗಿ ವಸ್ತುಗಳ ಮಳಿಗೆ ಶುಭಾರಂಭ: ಉನ್ನತ ಬ್ರಾಂಡ್ ಗಳ ಉತ್ಪನ್ನಗಳ ಭರ್ಜರಿ ದರ ಕಡಿತ ಮಾರಾಟ

0
IMG-20240902-WA0004.jpg

ವಿಟ್ಲ: ವಿಟ್ಲದ ಖಾಸಗಿ ಬಸ್ ನಿಲ್ದಾಣದಲ್ಲಿ ನೂತನವಾಗಿ CENTER POINT ಗೃಹೋಪಯೋಗಿ ವಸ್ತುಗಳ ಮಳಿಗೆ ಶುಭಾರಂಭಗೊಂಡಿತು.‌

ಶೈಖುನಾ ಮಹಮೂದಲ್ ಫೈಝಿ ವಾಲೆಮುಂಡೋವು ನೂತನ ಸಂಸ್ಥೆಯನ್ನು ಉದ್ಘಾಟಿಸಿದರು. ಸಿರಾಜುಲ್ ಹುದಾ ಎಜುಕೇಶನ್ ಟ್ರಸ್ಟ್ ಕರೋಪಾಡಿ ಇದರ ಸ್ಥಾಪಕ ಅಬ್ದುಲ್ ಹಮೀದ್ ಸಖಾಫಿ, ಮಹಮ್ಮದ್ ಮುಸ್ಲಿಯಾರ್ ಇನೋಳಿ, ಅಬ್ದುಲ್ ಹಮೀದ್ ಬಾಖವಿ ದುವಾಃ ಆಶೀರ್ವಚನ ನೀಡಿದರು. ಶಾಕಿರ್ ಅಳಕೆಮಜಲು, ವ್ಯವಸ್ಥಾಕರಾದ ಮಹಮ್ಮದ್ ಕಣಿಯೂರು, ಅಬ್ದುಲ್ ಖಾದರ್ ಕಣಿಯೂರು, ಶಾಹುಲ್ ಹಮೀದ್ ಕಣಿಯೂರು, ಅಬೂಬಕರ್ ಅನಿಲಕಟ್ಟೆ, ಝಾಕಿರ್ ಹುಸೇನ್ ಸಿಟಿ ಮುಂತಾದವರು ಉಪಸ್ಥಿತರಿದ್ದರು.

ಬಂಟ್ವಾಳ ಹಾಗೂ ಪುತ್ತೂರು ತಾಲೂಕು ಆಸುಪಾಸು ಹಾಗೂ ಗಡಿ ಭಾಗದಲ್ಲಿ ಇಂತಹ ದೊಡ್ಡ ಮಟ್ಟದ ಮಕ್ಕಳ ಎಲೆಕ್ಟ್ರಿಕ್ ಚಾರ್ಜಿಂಗ್ ಕಾರು ಜೀಪು ಬೈಕು ಸ್ಕೂಟಿ ಗಳ ಸಂಗ್ರಹವಿರುವ ಪ್ರಥಮ ಸಂಸ್ಥೆಯಾಗಿದ್ದು ಗ್ರಾಹಕರಿಗೆ ಒಂದು ಉತ್ತಮ ಅವಕಾಶವಾಗಿದೆ.
ಈಗಾಗಲೇ SMART CHOICE ಎಂಬ ಹೆಸರಿನಲ್ಲಿ ವಿವಿಧ ಉನ್ನತ ಬ್ರಾಂಡ್ ಗಳ ಸೈಕಲ್ಗಳ ಉತ್ತಮ ಸಂಗ್ರಹವಿರುವ ಒಂದು ಸಂಸ್ಥೆಯನ್ನು ಯಶಸ್ವಿಯಾಗಿ ನಡೆಸುತ್ತಿದ್ದಾರೆ.

ಗ್ರಹೋಪಯೋಗಿ ವಸ್ತುಗಳಲ್ಲಿ ಎಲ್ಲಾ ಉನ್ನತ ಬ್ರಾಂಡ್ ಗಳ ಉತ್ಪನ್ನಗಳು ಭರ್ಜರಿ ದರ ಕಡಿತದೊಂದಿಗೆ ಲಭ್ಯವಿದೆ. ಪ್ಲಾಸ್ಟಿಕ್, ಸ್ಟೀಲ್, ನಾನ್ ಸ್ಟಿಕ್ ಪಾತ್ರೆಗಳಿಂದ ಹಿಡಿದು ಎಲ್ಲಾ ಎಲೆಕ್ಟ್ರಿಕಲ್ ಹಾಗೂ ಇಲೆಕ್ಟ್ರಾನಿಕ್ ಗ್ರಹೋಪಯೋಗಿ ವಸ್ತುಗಳು ಲಭ್ಯವಿದೆ. ಇನ್ವರ್ಟರ್ ಗಳು ಉತ್ತಮ ದ ರದೊಂದಿಗೆ ಡೆಲಿವರಿ ಹಾಗೂ ಇನ್ಸ್ಟಾಲೇಷನ್ ಉಚಿತವಾಗಿ ಲಭ್ಯವಿದೆ.

ಪ್ರತೀ 250 ರ ಖರೀದಿಯ ಮೇಲೆ ಅದ್ರಷ್ಟ ಕೂಪನ್ ದೊರೆಯಲ್ಲಿದ್ದು ಗೋಲ್ಡ್ ಕಾಯಿನ್, ವಾಷಿಂಗ್ ಮೆಷಿನ್, ಗ್ಯಾಸ್ ಸ್ಟವ್, ಮಿಕ್ಸಿ ಹಾಗೂ ಕಿಚನ್ ಸೆಟ್ ನೊಂದಿಗೆ 5 ಬಂಪರ್ ಬಹುಮಾನಗಳು ಗ್ರಾಹಕರಿಗೆ ದೊರೆಯಲಿದೆ. ವಿವಿಧ ಬ್ರಾಂಡ್ ಗಳ ಮಕ್ಕಳ ಡೇಪರ್ ಗಳು ಶೇ.50 ರವರೆಗೆ ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ.

ಸ್ಟೇಟಸ್ ವೀಡಿಯೊ ಹಾಕಿದವರ ಪೈಕಿ ವಿಜೇತರಿಗೆ ಕಿಡ್ಸ್ ಎಲೆಕ್ಟ್ರಿಕ್ ಜೀಪ್ ಬಹುಮಾನವಾಗಿ ದೊರೆಯಲಿದೆ. ಉದ್ಘಾಟನಾ ಪ್ರಯುಕ್ತ 79 ರೂ ಬೆಲೆಯ ಸುಂದರವಾದ ಗಾಜಿನ ಬೌಲ್ ಗಿಫ್ಟ್ ಸೆಟ್ ಬರೀ 19 ರೂ ಗೆ ಪಡೆಯುವ ಅವಕಾಶ ಕಲ್ಪಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!