February 3, 2026

“ಊಟದಲ್ಲಿ ಮಟನ್‌ ಪೀಸ್‌ ಸಿಕ್ಕಿಲ್ಲ”ವೆಂದು ಮದುವೆ ಮನೆಯಲ್ಲಿ ಕಲ್ಲು, ದೊಣ್ಣೆಗಳಿಂದ ಮಾರಾಮಾರಿ

0
image_editor_output_image-1357490059-1725085455116.jpg

ತೆಲಂಗಾಣ: ಮಟನ್‌ ಊಟದಲ್ಲಿ ಸರಿಯಾಗಿ ಮಟನ್‌ ಪೀಸ್‌ ಬಡಿಸಿಲ್ಲ ಎಂದು ವರನ ಸ್ನೇಹಿತರು ತಗಾದೆ ತೆಗೆದಿದ್ದು, ಈ ವಿಷಯ ದೊಡ್ಡದಾಗಿ ವರ ಹಾಗೂ ವಧುವಿನ ಸಂಬಂಧಿಕರ ನಡುವೆ ಮಾರಾಮಾರಿ ನಡೆದಿದೆ. ಈ ಸುದ್ದಿ ಇದೀಗ ಸಖತ್‌ ವೈರಲ್‌ ಆಗುತ್ತಿದೆ.

ಈ ಘಟನೆ ತೆಲಂಗಾಣದ ನಿಜಾಮಾಬಾದ್‌ ಜಿಲ್ಲೆಯ ನವಿಪೇಟ್‌ನಲ್ಲಿ ನಡೆದಿದ್ದು, ಮದುವೆ ಊಟದಲ್ಲಿ ಮಟನ್‌ ಪೀಸ್‌ ಸರಿಯಾಗಿ ಬಡಿಸಿಲ್ಲವೆಂಬ ಕಾರಣಕ್ಕೆ ಮದುವೆ ಮನೆಯೇ ರಣರಂಗವಾಗಿದೆ.

ವರದಿಗಳ ಪ್ರಕಾರ ನವಿಪೇಟ್‌ನ ಎಸ್‌ಆರ್‌ ಫಂಕ್ಷನ್‌ ಹಾಲ್‌ನಲ್ಲಿ ಬುಧವಾರ (ಆಗಸ್ಟ್‌ 28) ಮದುವೆ ಔತಣಕೂಟವನ್ನು ಏರ್ಪಡಿಸಲಾಗಿತ್ತು. ಊಟದ ಸಮಯದಲ್ಲಿ ವಧುವಿನ ಕಡೆಯವರು ಮಟನ್‌ ಊಟದಲ್ಲಿ ಸರಿಯಾಗಿ ಮಟನ್‌ ಪೀಸ್‌ ಬಡಿಸಿಲ್ಲವೆಂದು ವರನ ಸ್ನೇಹಿತರು ಕಿರಿಕ್‌ ಮಾಡಿದ್ದಾರೆ. ಈ ವಾಗ್ವಾದ ಅತಿರೇಕಕ್ಕೆ ತಿರುಗಿ ವಧು ಹಾಗೂ ವರನ ಕಡೆಯವರು ಕಲ್ಲು, ದೊಣ್ಣೆಗಳಿಂದ ಪರಸ್ಪರ ಹೊಡೆದಾಡಿಕೊಂಡಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!