ವಿಟ್ಲ: ಉಕ್ಕುಡ-ಬೈರಿಕಟ್ಟೆ ರಸ್ತೆಯಲ್ಲಿ ಮತ್ತೆ ಕೆಟ್ಟು ನಿಂತ ಲಾರಿ: ವಾಹನ ಸಂಚಾರದಲ್ಲಿ ಅಸ್ತವ್ಯಸ್ತ
ವಿಟ್ಲ: ಉಕ್ಕುಡ-ಬೈರಿಕಟ್ಟೆ ರಸ್ತೆಯಲ್ಲಿ ಮಾರ್ಬಲ್ ಸಾಗಾಟದ ಲಾರಿ ಕೆಟ್ಟು ನಿಂತ ಪರಿಣಾಮ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ.
ಬೆಂಗಳೂರು ಕಡೆಯಿಂದ ವಿಟ್ಲ ಮೂಲಕ ಕನ್ಯಾನ ಕಡೆಗೆ ಮಾರ್ಬಲ್ ಕೊಂಡೊಯ್ಯುತ್ತಿದ್ದ ಘನ ಗಾತ್ರದ ಲಾರಿ ತಾಂತ್ರಿಕ ದೋಷದಿಂದ ಕೆಟ್ಟು ನಿಂತಿದೆ. ಇದರಿಂದ ವಾಹನ ಸಂಚಾರದಲ್ಲಿ ಅಸ್ತವ್ಯಸ್ತಗೊಂಡಿದೆ. ನಿನ್ನೆ ಅಕ್ರಮ ಮಣ್ಣು ಸಾಗಾಟದ ಲಾರಿ ಕೆಟ್ಟು ನಿಂತಿತ್ತು. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಇದೇ ರಸ್ತೆಯಲ್ಲಿ ಮಾರ್ಬಲ್ ಸಾಗಾಟದ ಲಾರಿ ಕೆಟ್ಟು ನಿಂತು ಸಾರ್ವಜನಿಕರು ತೊಂದರೆ ಅನುಭವಿಸಿದರು. ಈ ರಸ್ತೆಯಲ್ಲಿ ಘನ ಗಾತ್ರದ ಲಾರಿಗಳ ಸಂಚಾರ ನಿಷೇಧಿಸಿದ್ದರೂ ಬೇಕಾಬಿಟ್ಟಿ ಲಾರಿಗಳ ಸಂಚಾರ ನಿರಂತರವಾಗಿ ಸಂಚಾರ ಮಾಡುತ್ತಿದ್ದ ಪರಿಣಾಮ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ.



