ತಾಯಿಯನ್ನು ಕೊಂದು ಇನ್ಸ್ಟಾಗ್ರಾಂನಲ್ಲಿ” Sorry Mom’ ಎಂದು ಸ್ಟೇಟಸ್ ಹಾಕಿದ ಮಗ
ಗುಜರಾತ್: ಹೆತ್ತ ತಾಯಿಯನ್ನೇ ಕೊಂದು ಬಳಿಕ ಆಕೆಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹಾಕಿ ಸ್ವಾರಿ ಅಮ್ಮಾ ಎಂದು ಪೋಸ್ಟ್ ಹಾಕಿರುವ ಆಘಾತಕಾರಿ ಘಟನೆಯೊಂದು ಗುಜರಾತ್‌ನ ರಾಜ್‌ಕೋಟ್‌ನಲ್ಲಿ ಬೆಳಕಿಗೆ ಬಂದಿದೆ.
ರಾಜ್‌ಕೋಟ್‌ನ ವಿಶ್ವವಿದ್ಯಾಲಯ ರಸ್ತೆಯಲ್ಲಿರುವ ಭಗತ್ ಸಿಂಗ್ ಗಾರ್ಡನ್‌ನಲ್ಲಿರುವ ಮನೆಯಲ್ಲಿ ಈ ಘಟನೆ ನಡೆದಿದ್ದು ಜ್ಯೋತಿಬೆನ್ ಗೋಸಾಯಿ(48) ಮೃತ ಮಹಿಳೆಯಾಗಿದ್ದು. ನೀಲೇಶ್ ಗೋಸಾಯಿ ಆರೋಪಿಯಾಗಿದ್ದಾನೆ.
ಅಪರಾಧ ಎಸಗಿದ ಬಳಿಕ ತನ್ನ ತಾಯಿಯ ಮೃತದೇಹದ ಫೋಟೋವನ್ನು ಇನ್ಸ್ಟಾಗ್ರಾಮ್ ನಲ್ಲಿ “ಕ್ಷಮಿಸಿ ತಾಯಿ ನಾನು ನಿನ್ನನ್ನು ಕೊಲ್ಲುತ್ತಿದ್ದೇನೆ, ನಾನು ನಿನ್ನನ್ನು ಕಳೆದುಕೊಳ್ಳುತ್ತೇನೆ, ಓಂ ಶಾಂತಿ” ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್ ಹಾಕಿದ್ದಾನೆ. ಮತ್ತೊಂದು ಪೋಸ್ಟ್‌ನಲ್ಲಿ, “ನಾನು ನನ್ನ ತಾಯಿಯನ್ನು ಕೊಲ್ಲುತ್ತಿದ್ದೇನೆ, ನನ್ನ ಜೀವನ ಕಳೆದುಹೋಗಿದೆ, ಕ್ಷಮಿಸಿ ಅಮ್ಮ, ಓಂ ಶಾಂತಿ, ಮಿಸ್ ಯೂ ಅಮ್ಮ ” ಎಂದು ಬರೆದುಕೊಂಡಿದ್ದಾನೆ.





