ಮಗುವನ್ನು ಕತ್ತು ಸೀಳಿ ಹತ್ಯೆಗೈದು ಸೂಟ್‍ಕೇಸ್‍ಗೆ ತುಂಬಿ ಪೊದೆಗೆ ಎಸೆದ ತಾಯಿ
ಪಾಟ್ನಾ: ಮಹಿಳೆಯೊಬ್ಬಳು ತನ್ನ ಪ್ರಿಯಕರನ ಬಳಿ ಹೋಗಲು ಅಡ್ಡಿಯಾಗಿದ್ದ 3 ವರ್ಷದ ಮಗುವನ್ನು ಕತ್ತು ಸೀಳಿ ಹತ್ಯೆಗೈದು ಸೂಟ್‍ಕೇಸ್‍ಗೆ ತುಂಬಿ ಪೊದೆಗೆ ಎಸೆದ ಘಟನೆ ಬಿಹಾರದ ಮುಜಾಫರ್‌ಪುರದಲ್ಲಿ ನಡೆದಿದೆ.
ಈ ಸಂಬಂಧ ಹತ್ಯೆಗೀಡಾದ ಮಗುವಿನ ತಾಯಿ ಕಾಜಲ್‍ಳನ್ನು ಪೊಲೀಸರು ಬಂಧಿಸಿದ್ದಾರೆ. ತನಿಖೆ ವೇಳೆ ಮಹಿಳೆ ವಿವಾಹೇತರ ಸಂಬಂಧ ಹೊಂದಿದ್ದು, ಪತಿಯನ್ನು ತೊರೆದು ಪ್ರಿಯಕರನೊಂದಿಗೆ ತೆರಳಲು ಕೃತ್ಯ ಎಸಗಿದ್ದಾಗಿ ಒಪ್ಪಿಕೊಂಡಿದ್ದಾಳೆ. ಆಕೆಯ ಪ್ರಿಯಕರನಿಗೆ ಮಗಳು ಬರಲು ಇಷ್ಟವಿರಲಿಲ್ಲ. ಹೀಗಾಗಿ ಮಗುವನ್ನು ಕೊಲೆಗೈದಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಟಿವಿಯಲ್ಲಿ ಬರುವ ಕ್ರೈಮ್ ಸೀರೀಸ್ ನೋಡಿದ ನಂತರ ಮಗಳ ಕೊಲೆಗೆ ಯೋಜನೆ ಹಾಕಿದ್ದಾಗಿ ಮಹಿಳೆ ತನಿಖೆ ವೇಳೆ ಒಪ್ಪಿಕೊಂಡಿದ್ದಾಳೆ.




