ಲೈಂಗಿಕ ಹಗರಣ: ಮಲಯಾಳಂ ನಟ ಸಿದ್ದೀಖಿ ವಿರುದ್ಧ ಅತ್ಯಾಚಾರ ಆರೋಪದಡಿ FIR ದಾಖಲು
ತಿರುವನಂತಪುರಂ: ಮಲಯಾಳಂ ಚಿತ್ರೋದ್ಯಮದಲ್ಲಿನ ಲೈಂಗಿಕ ಹಗರಣ ಭಾರೀ ಸಂಚಲನ ಮೂಡಿಸಿದ್ದು, ನಟಿಯರ ಆರೋಪದ ಹಿನ್ನೆಲೆಯಲ್ಲಿ ಮಲಯಾಳಂ ನಟ ಸಿದ್ದಿಖಿ ವಿರುದ್ಧ ಕೇರಳ ಪೊಲೀಸರು ಅತ್ಯಾಚಾರ ಆರೋಪದಡಿ ಎಫ್ ಐಆರ್ ದಾಖಲಿಸಿರುವುದಾಗಿ ವರದಿ ತಿಳಿಸಿದೆ.
ನಟಿಯರ ದೂರಿನ ಆಧಾರದ ಮೇಲೆ ತ್ರಿವೇಂಡ್ರಮ್ ಮ್ಯೂಸಿಯಂ ಪೊಲೀಸ್ ಜಾಮೀನು ರಹಿತ ಆರೋಪದಲ್ಲಿ ರೇಪ್ ಕೇಸ್ ಅನ್ನು ದಾಖಲಿಸಿರುವುದಾಗಿ ವರದಿ ವಿವರಿಸಿದೆ.
ಮಲಯಾಳಂ ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳ ಆರೋಪದ ಕುರಿತು ತನಿಖೆ ನಡೆಸಲು ರಚಿಸಿದ್ದ ವಿಶೇಷ ತನಿಖಾ ತಂಡಕ್ಕೆ ಮಂಗಳವಾರ (ಆ.27) ಸಂಜೆ ನಟಿ ದೂರು ನೀಡಿರುವುದಾಗಿ ವರದಿ ತಿಳಿಸಿದೆ.