August 22, 2026

ಶಿವಮೊಗ್ಗದ ಕೇಂದ್ರ ಕಾರಾಗೃಹದ ಮೇಲೆ ಎಸ್ಪಿ ನೇತೃತ್ವದ ತಂಡದಿಂದ ದಿಢೀರ್ ದಾಳಿ

0
image_editor_output_image241066284-1724830521138.jpg

ಶಿವಮೊಗ್ಗ: ರೇಣುಕಾಸ್ವಾಮಿ ಕೊಲೆಯ ಇಬ್ಬರು ಆರೋಪಿಗಳು ಶಿವಮೊಗ್ಗ ಜೈಲಿಗೆ ಶಿಫ್ಟ್ ಆಗುತ್ತಿರುವ ಬೆನ್ನಲ್ಲೆ ಶಿವಮೊಗ್ಗದ ಕೇಂದ್ರ ಕಾರಾಗೃಹದ ಮೇಲೆ ಎಸ್ಪಿ ನೇತೃತ್ವದ ತಂಡ ದಿಢೀರ್ ದಾಳಿ ಮಾಡಿದ್ದಾರೆ. ಎಸ್ಪಿ ಮಿಥುನ್ ಕುಮಾರ್ ಸೇರಿದಂತೆ 120ಕ್ಕೂ ಹೆಚ್ಚು ಪೊಲೀಸರು ದಾಳಿ ಮಾಡಿ ಪರಿಶೀಲನೆ ನಡೆಸಿದರು.

ರೇಣುಕಾಸ್ವಾಮಿ‌ ಕೊಲೆ ಆರೋಪಿಗಳಿಬ್ಬರು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಶಿವಮೊಗ್ಗ ಕೇಂದ್ರ ಕಾರಾಗೃಹಕ್ಕೆ ಶಿಫ್ಟ್ ಆಗುತ್ತಿದ್ದಾರೆ. ಆರೋಪಿತರಾದ ಲಕ್ಷ್ಮಣ ಹಾಗು ಜಗದೀಶ್ ರನ್ನ ಶಿವಮೊಗ್ಗಕ್ಕೆ ಪೊಲೀಸರು ಇಂದು ಕರೆತರಲಿದ್ದಾರೆ. ಇವರಿಬ್ಬರೂ ಶಿಫ್ಟ್ ಆಗುವ ಮುನ್ನವೇ ದಾಳಿ ಮಾಡಿರುವುದು ಸಾಕಷ್ಟು ಕುತೂಹಲ ಕೆರಳಿಸಿದೆ. ಜೈಲಿನಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರ ತಂಡ ಜೈಲಿನಲ್ಲಿರುವ ಬ್ಯಾರಕ್ ತಪಾಸಣೆ ಮಾಡಿ, ನಿಷೇಧಿತ ವಸ್ತುಗಳ ಶೋಧ ನಡೆಸಿದರು.

Leave a Reply

Your email address will not be published. Required fields are marked *

You may have missed

error: Content is protected !!