ಖ್ಯಾತ ಮಲಯಾಳಂ ನಟ ನಿರ್ಮಲ್ ಬೆನ್ನಿ ಹೃದಯಾಘಾತದಿಂದ ನಿಧನ
ಕೊಚ್ಚಿ : ಖ್ಯಾತ ಮಲಯಾಳಂ ನಟ ನಿರ್ಮಲ್ ಬೆನ್ನಿ ಅವರು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಶನಿವಾರ ಮುಂಜಾನೆ ಅವರಿಗೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದ್ದು ಬೆನ್ನಿ ನಿಧನಕ್ಕೆ ಸಿನಿತಾರೆಯರು, ರಾಜಕೀಯ ನಾಯಕರು ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.
ಇಂದು ಬೆಳಗ್ಗೆ ಹೃದಯಾಘಾತದಿಂದ ನಟ ನಿರ್ಮಲ್ ಬೆನ್ನಿ ನಿಧನರಾಗಿದ್ದಾರೆ ಎಂದು ಚಿತ್ರ ನಿರ್ಮಾಪಕ ಸಂಜಯ್ ಪಡಿಯೂರ್ ಫೇಸ್ ಬುಕ್ ನಲ್ಲಿ ತಿಳಿಸಿದ್ದಾರೆ.
“ಪ್ರಿಯ ಸ್ನೇಹಿತನಿಗೆ ಹೃದಯವಿದ್ರಾವಕ ವಿದಾಯ… ಆಮೇನ್ ಚಿತ್ರದಲ್ಲಿನ ಕೇಂದ್ರ ಪಾತ್ರ ಕೊಚ್ಚನಾಗಿ ನಟಿಸಿದ್ದ ನನ್ನ ಪ್ರಿಯ ಸ್ನೇಹಿತ ನಿರ್ಮಲ್ ಇಂದು ಬೆಳಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಪ್ರಿಯ ಸ್ನೇಹಿತನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಅವರು ಫೇಸ್ಬುಕ್‌ನಲ್ಲಿ ಬರೆದಿದ್ದಾರೆ





