ಮಂಗಳೂರು: 12 ವರ್ಷಗಳ ಬಳಿಕ ಗರಿಷ್ಠ ಮಟ್ಟದಲ್ಲಿ ಏರಿಕೆ ಕಂಡ ರಬ್ಬರ್ ಬೆಲೆ
ಮಂಗಳೂರು: ರಬ್ಬರ್ ಬೆಲೆ 12 ವರ್ಷಗಳ ನಂತರ ದಾಖಲೆಯ ಗರಿಷ್ಠ ಮಟ್ಟದಲ್ಲಿ ಏರಿಕೆ ಕಂಡಿದೆ. ರಬ್ಬರ್ ಬೋರ್ಡ್ ಕೆಜಿಗೆ 235 ರೂ. ಬೆಲೆ ನಿಗದಿಪಡಿಸಿದೆ.
ಕಾಸರಗೋಡು ಸೇರಿದಂತೆ ಕೇರಳದ ಬಹುತೇಕ ಪ್ರದೇಶಗಳಲ್ಲಿ 237 ರಿಂದ 241 ರೂ.ಗಳಿಗೆ ಮಾರಾಟವಾಗುತ್ತಿದೆ. ಕೆಲವು ವ್ಯಾಪಾರಿಗಳು 241 ರೂ.ಗೆ ಮಾರಾಟ ಮಾಡಿದ್ದಾರೆ. 2011-12ರಲ್ಲಿ ರಬ್ಬರ್ ಶೀಟ್ಗಳ ಬೆಲೆ ಕಿಲೋಗೆ 283 ರೂ. ತಲುಪಿತ್ತು
ಅತಿವೃಷ್ಟಿ ಹಾಗೂ ಹವಾಮಾನ ವೈಪರೀತ್ಯದಿಂದ ಮಾರುಕಟ್ಟೆಯಲ್ಲಿ ರಬ್ಬರ್ ಕೊರತೆ ಉಂಟಾಗಿದೆ. ಕಳೆದ ಕೆಲವು ದಿನಗಳಿಂದ ಕೆಜಿಗೆ 2 ರಿಂದ 3 ರೂ. ಬೆಲೆ ಏರಿಕೆಯಾಗಿದೆ. ಇದಕ್ಕೆ ಮುಖ್ಯ ಕಾರಣ ಪೂರೈಕೆ ಕೊರತೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ. ಸದ್ಯದ ಪರಿಸ್ಥಿತಿ ಮುಂದುವರಿದರೆ ಒಂದು ವಾರದಲ್ಲಿ ಕಿಲೋಗೆ 250 ರೂ. ತಲುಪಬಹುದು ಎಂದು ಅಂದಾಜಿಸಲಗಿದೆ.