ಚರಂಡಿ ನೀರಿಗೆ ಬಿದ್ದು 4 ವರ್ಷದ ಬಾಲಕ ಸಾವು
ಬಳ್ಳಾರಿ: ಮನೆ ಹತ್ತಿರ ನಿಂತಿದ್ದ ಚರಂಡಿ ನೀರಿಗೆ ಬಿದ್ದು 4 ವರ್ಷದ ಬಾಲಕ ಸಾವನ್ನಪ್ಪಿದ ಘಟನೆ ಹೊಸಪೇಟೆ ನಗರದ ಅನಂತಶಯನ ಗುಡಿ ಬಡಾವಣೆಯಲ್ಲಿ ನಡೆದಿದೆ.
ವಿರಾಟ್.ಜೆ (4) ಮೃತ ಬಾಲಕ. ಬಾಲಕನ ಮನೆ ಹತ್ತಿರದ ಖಾಲಿ ಜಾಗದಲ್ಲಿ ಚರಂಡಿ ನೀರು ನಿಂತಿತ್ತು. ಆಟವಾಡಲು ಹೋದ ಸಂದರ್ಭ ನೀರು ನಿಂತಿರುವುದನ್ನು ಗಮನಿಸದೇ ಬಾಲಕ ನೀರು ತುಂಬಿದ್ದ ಗುಂಡಿಗೆ ಬಿದ್ದಿದ್ದಾನೆ.
ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೇ ಬಾಲಕ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.





