July 5, 2026

ಉಡುಪಿ: ಪತಿ, ಪತ್ನಿಯ ಜಗಳ ಪತ್ನಿಯ ಕೊಲೆಯಲ್ಲಿ ಅಂತ್ಯ

0
image_editor_output_image-1796798003-1724403302630.jpg

ಉಡುಪಿ: 8 ತಿಂಗಳ ಹಿಂದೆ ಮದುವೆಯಾದ ಜೋಡಿಯ ನಡುವೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾದ ಘಟನೆ ಸಾಲಿಗ್ರಾಮದ ಕಾರ್ಕಡದಲ್ಲಿ ಸಂಭವಿಸಿದೆ.

ಬೆಳ್ಳಂಬೆಳಿಗ್ಗೆಯೇ ಗಂಡ ಹೆಂಡತಿ ನಡುವೆ ಜಗಳ ಉಂಟಾಗಿದ್ದು ಇದು ತಾರಕಕ್ಕೇರಿ ಪತಿ ಪತ್ನಿಗೆ ಹೊಡೆದ ಪರಿಣಾಮ, ಪತ್ನಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಆರೋಪಿಯನ್ನು ಸಾಸ್ತಾನ ಗುಂಡ್ಮಿ ನಿವಾಸಿ ಕಿರಣ್ ಉಪಾಧ್ಯಾಯ(30) ಎಂದು ಗುರುತಿಸಲಾಗಿದೆ. ಆತನ ಪತ್ನಿ ಜಯಶ್ರೀ(28) ಮೃತ ದುರ್ದೈವಿ.

8 ತಿಂಗಳ ಹಿಂದಷ್ಟೇ ಕಿರಣ ಉಪಾಧ್ಯಾಯ ಹಾಗೂ ಜಯಶ್ರೀ ವಿವಾಹವಾಗಿತ್ತೆನ್ನಲಾಗಿದೆ. ಕಳೆದ ಮೂರು ತಿಂಗಳಿನಿಂದ ಸಾಲಿಗ್ರಾಮ ಕಾರ್ಕಡ ಪಡುವಳಿಯ ಮನೆಯಲ್ಲಿ ಬಾಡಿಗೆಯಲ್ಲಿ ವಾಸ ಮಾಡಿಕೊಂಡಿದ್ದರು.

ಸ್ಥಳೀಯರು ಗಂಡ ಹೆಂಡತಿ ನಡುವೆ ಜಗಳ ಉಂಟಾಗಿ, ಇದರಿಂದಲೇ ಪತಿ ಪತ್ನಿಗೆ ಹಲ್ಲೆ ನಡೆಸಿದ್ದಾಗ ಪತ್ನಿ ಜಯಶ್ರೀ ತಲೆಗೆ ಗಂಭೀರ ಗಾಯಗೊಂಡು ಸಾವನ್ನಪ್ಪಿದ್ದಾರೆ ಎನ್ನುತ್ತಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!