ಕಾರವಾರ: ಸೇತುವೆ ಕುಸಿದು ನದಿಗೆ ಬಿದ್ದಿದ್ದ ಲಾರಿ ಪತ್ತೆ
ಕಾರವಾರ : ಆಗಸ್ಟ್ ಮೊದಲ ವಾರದಲ್ಲಿ ಸೇತುವೆ ಕುಸಿದು ಕಾಳಿ ನದಿ ಪಾಲಾಗಿದ್ದ ಟ್ರಕ್ ಸತತ 8 ಗಂಟೆಗಳ ಪರಿಶ್ರಮದಲ್ಲಿ ಕೊನೆಗೂ ದಡ ಸೇರಿದೆ. ಆಗಸ್ಟ್ 7 ರಂದು ಕಾಳಿ ನದಿಯ ಹಳೆಯ ಸೇತುವೆ ಕುಸಿದ ಪರಿಣಾಮ ತಮಿಳು ನಾಡಿನ ಮೂಲದ ಲಾರಿ ನದಿ ಪಾಲಾಗಿತ್ತು.
8 ತಾಸುಗಳ ಕಾಲ ನಡೆದ ಕಾರ್ಯಾಚರಣೆಯಲ್ಲಿ ಕಾಳಿ ನದಿಯ ಅಳ್ವೇವಾಡ ದಂಡೆಗೆ ಗುರುವಾರ ಸಂಜೆ ಸುಮಾರಿಗೆ ಎಳೆದು ತರಲಾಗಿದೆ.ಬೆಳಿಗ್ಗೆಯಿಂದ ಐ.ಆರ್. ಬಿ. ಕಂಪನಿ ಸಿಬ್ಬಂದಿ ಹಾಗೂ ಜಿಲ್ಲಾಡಳಿತ ಜಂಟಿ ನಡೆಸಿದ್ದ ಜಂಟಿ ಕಾರ್ಯಾಚರಣೆ ಫಲಕೊಟ್ಟಿತ್ತು.
ಎಸ್ ಡಿ ಆರ್ ಎಫ್, ಕರಾವಳಿ ಕಾವಲು ಪಡೆ ಕೂಡ ಕಾರ್ಯಾಚರಣೆಗೆ ಸಾಥ್ ನೀಡಿತ್ತು. ದಡಕ್ಕೆ ಬಂದ ಲಾರಿಯನ್ನು ಕೆಲ ನಿಮಿಷದಲ್ಲಿ ಕ್ರೇನ್ ಮೂಲಕ ಮೇಲಕ್ಕೆತ್ತುವ ಕಾರ್ಯವನ್ನು ಯಶಸ್ವಿಯಾಗಿ ಮಾಡಲಾಯಿತು.




