ಬ್ರೆಜಿಲ್‌ನ ಸಾವೊ ಪಾಲೊದಲ್ಲಿ ವಿಮಾನ ಪತನ: 62 ಮಂದಿ ಸಾವು
ಬ್ರೆಜಿಲ್‌ನ ಸಾವೊ ಪಾಲೊದಲ್ಲಿ ವಿಮಾನವೊಂದು ಪತನಗೊಂಡಿದ್ದು, ಅದರಲ್ಲಿದ್ದ 62 ಮಂದಿಯೂ ಕೂಡಾ ಸಾವನ್ನಪ್ಪಿದ್ದಾರೆ.
ಬ್ರೆಜಿಲ್‌ನ ದಕ್ಷಿಣ ರಾಜ್ಯವಾದ ಪರಾನಾದಲ್ಲಿನ ಕ್ಯಾಸ್ಕಾವೆಲ್‌ನಿಂದ ಸಾವೊ ಪಾಲೊ ನಗರದ ಗೌರುಲ್ಹೋಸ್ ವಿಮಾನ ನಿಲ್ದಾಣಕ್ಕೆ ಹಾರುತ್ತಿದ್ದಾಗ ವಿನ್ಹೆಡೊ ಪಟ್ಟಣದಲ್ಲಿ ಪತನಗೊಂಡಿದೆ ಎಂದು ವೊಪಾಸ್ ಏರ್‌ಲೈನ್ ಹೇಳಿದೆ.
ಎಟಿಆರ್ 72-500 ವಿಮಾನದಲ್ಲಿ 57 ಪ್ರಯಾಣಿಕರು ಮತ್ತು ನಾಲ್ವರು ಸಿಬ್ಬಂದಿಗಳಿದ್ದರು. ಯಾರೂ ಕೂಡಾ ಬದುಕುಳಿದಿಲ್ಲ ಎಂದು ಸ್ಥಳೀಯ ಅಧಿಕಾರಿಗಳು ಹೇಳಿದ್ದಾರೆ.




