ತುಂಬೆಯಿಂದ ಪೂರೈಕೆಯಾಗುವ ನೀರಿನ ಪೈಪ್ ಲೈನ್ ಗೆ ಹಾನಿ: ಮಂಗಳೂರಿಗೆ ನೀರಿಲ್ಲ
ಮಂಗಳೂರು: ತುಂಬೆ ಬಳಿ ಗೇಲ್ ಇಂಡಿಯಾದ ಕಾಮಗಾರಿಯಿಂದ ತುಂಬೆಯಿಂದ ಪಡೀಲ್ ವರೆಗೆ ಪೂರೈಕೆಯಾಗುವ ನೀರಿನ ಪೈಪ್ ಲೈನ್ ಗೆ ಹಾನಿ ಉಂಟಾಗಿದೆ.
ಇದರಿಂದಾಗಿ ಮಂಗಳಾದೇವಿ, ಪಾಂಡೇಶ್ವರ, ಕಣ್ಣೂರು, ಪಡೀಲ್, ಬಿಕರ್ನಕಟ್ಟೆ, ಕುಡುಪು, ವಾಮಂಜೂರು, ವೆಲೆನ್ಸಿಯ, ಕಂಕನಾಡಿ, ಹೊಯ್ದೆ ಬಝಾರ್, ಬೋಳಾರ, ಜೆಪ್ಪಿನಮೋಗರು, ಜೆಪ್ಪು, ಅತ್ತಾವರ, ಸ್ಟೇಟ್ ಬ್ಯಾಂಕ್, ನಾಗುರಿ, ಚಿಲಿಂಬಿ, ಲೇಡಿ ಹಿಲ್, ಬಿಜೈ, ಬಜಾಲ್, ಶಕ್ತಿನಗರ – ಕುಂಜತ್ತಬೈಲ್ – ಬೊಂದೇಲ್ ಪ್ರದೇಶ ಹಾಗೂ ಉಳ್ಳಾಲದಲ್ಲೂ ನೀರು ಪೂರೈಕೆಯಲ್ಲಿ ವ್ಯತ್ಯಯ ಆಗಲಿದೆ ಎಂದು ಮನಪಾ ಪ್ರಕಟನೆ ತಿಳಿಸಿದೆ.





