ಜ್ವರದಿಂದ ಬಳಲುತ್ತಿದ್ದ 8ನೇ ತರಗತಿಯ ವಿದ್ಯಾರ್ಥಿ ಮೃತ್ಯು
ಹುಣಸೂರು: ತೀವ್ರ ಜ್ವರದಿಂದ ಬಳಲುತ್ತಿದ್ದ ಎಂಟನೇ ತರಗತಿಯ ವಿದ್ಯಾರ್ಥಿ ಮೃತಪಟ್ಟಿರುವ ಘಟನೆ ತಾಲೂಕಿನ ರತ್ನಪುರಿಯಲ್ಲಿ ನಡೆದಿದೆ.
ತಾಲೂಕಿನ ರತ್ನಪುರಿಯ ಶುಂಠಿ ವ್ಯಾಪಾರಿ ನಾಸೀರ್ ಅವರ ಪುತ್ರ ಅವೇಜ್ (13) ಮೃತ ಬಾಲಕ.
ಈತ ರತ್ನಪುರಿಯ ಸಿಕೆಎಂಸಿ ಶಾಲೆಯಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದನು.
ಈತನಿಗೆ ಕಳೆದ ಮೂರು ದಿನಗಳಿಂದ ತೀವ್ರಜ್ವರ ಕಾಡುತ್ತಿತ್ತು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ, ತೀವ್ರ ನಿತ್ರಾಣಗೊಂಡಿದ್ದ ಅವೇಜ್‌ನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.




