ಗಾಂಜಾ ಕೊಂಡುಕೊಳ್ಳಲು ಮೊಬೈಲ್ ಕದಿಯುತ್ತಿದ್ದ ಆರೋಪಿಯ ಬಂಧನ
ಬೆಂಗಳೂರು: ಗಾಂಜಾ ಕೊಂಡುಕೊಳ್ಳಲು ಮೊಬೈಲ್ ಕದಿಯುತ್ತಿದ್ದ ಆರೋಪಿಯನ್ನು ವೈಟ್ಫೀಲ್ಡ್ ಪೊಲೀಸರು ಬಂಧಿಸಿದ್ದಾರೆ.
ಬಿಹಾರ ಮೂಲದ ಅಬ್ದುಲ್ ರಜಾಕ್ (22) ಬಂಧಿತ ಆರೋಪಿ. ಬಂಧಿತ ಆರೋಪಿ ಅಬ್ದುಲ್ ರಜಾಕ್ನಿಂದ 32 ಮೊಬೈಲ್ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಅಬ್ದುಲ್ ರಜಾಕ್ ಬೆಂಗಳೂರಿನ ಕಾಡುಗೋಡಿಯಲ್ಲಿ ವಾಸವಾಗಿದ್ದನು. ಅಬ್ದುಲ್ ರಜಾಕ್ ಚಿಕ್ಕವಯಸ್ಸಿನಿಂದಲೇ ಕಳ್ಳತನಕ್ಕೆ ಇಳಿದಿದ್ದನು.





