December 15, 2025

ವಯನಾಡ್ ಭೂಕುಸಿತ ದುರಂತ: ಮಣ್ಣಿನಡಿ ಸಿಲುಕಿ ರಕ್ಷಣೆಗಾಗಿ ಅಂಗಲಾಚಿದ ವ್ಯಕ್ತಿಯ ಹೃದಯ ವಿದ್ರಾವಕ ವೀಡಿಯೋ ವೈರಲ್

0
image_editor_output_image563205604-1722344122452

ವಯನಾಡ್ : ಕೇರಳದ ವಯನಾಡು ಜಿಲ್ಲೆಯ ಮೆಪ್ಪಾಡಿಯಲ್ಲಿ ಸಂಭವಿಸಿದ ಭಾರಿ ಮಳೆ ಹಾಗೂ ಭೂಕುಸಿತದಲ್ಲಿ ಸತ್ತವರ ಸಂಖ್ಯೆ 84ಕ್ಕೂ ಅಧಿಕ ಎಂದು ತಿಳಿದು ಬಂದಿದೆ.

ವ್ಯಕ್ತಿಯೊಬ್ಬರು ಮಣ್ಣಿನಡಿ ಸಿಲುಕಿಕೊಂಡಿದ್ದು, ಬೃಹತ್ ಬಂಡೆ ಹಿಡಿದುಕೊಂಡು ಸಹಾಯಕ್ಕಾಗಿ ಅಂಗಲಾಚಿದ ಹೃದಯ ವಿದ್ರಾವಕ ವೀಡಿಯೊ ವೈರಲ್ ಆಗಿದೆ.
ಭೂಕುಸಿತದಲ್ಲಿ ಸಿಲುಕಿರುವ ವ್ಯಕ್ತಿ ಸಹಾಯ ಕೋರಿದ್ದಾರೆ. ಪ್ರವಾಹದ ನೀರಿನಲ್ಲಿ ಬಂಡೆಗಳ ನಡುವೆ ಸಿಲುಕಿಕೊಂಡಿರುವ ಆತ ನನ್ನನ್ನು ರಕ್ಷಿಸಿ ಎಂದು ಬೇಡಿಕೊಂಡಿದ್ದಾನೆ. ಈ ಹೃದಯ ವಿದ್ರಾವಕ ವೀಡಿಯೊ ವೈರಲ್ ಆಗಿದೆ.

ನದಿ ಮತ್ತು ಮಣ್ಣಿನಡಿಯಿಂದ ಮೃತದೇಹಗಳನ್ನು ಹೊರ ತೆಗೆಯುವುದು ರಕ್ಷಣಾ ಕಾರ್ಯಕರ್ತರಿಗೆ ಸವಾಲಿನ ಕೆಲಸವಾಗಿದ್ದು, ಸತ್ತವರ ಸಂಖ್ಯೆಯನ್ನು ನಿಖರವಾಗಿ ಹೇಳಲಾಗುತ್ತಿಲ್ಲ ಎಂದು ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!